ಉದಯವಾಹಿನಿ, ಮಾಸ್ಕೋ: ಎಸ್ಕಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾಳೆಂದು ಶಂಕಿಸಿ ರಷ್ಯಾದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ದುಬೈನ ವೊಕೊ ಬೊನಿಂಗ್ಟನ್ ಹೋಟೆಲ್‌ನಲ್ಲಿ ಅನಸ್ತಾಸಿಯಾ (25) ಹತ್ಯೆಯಾದ ಮಹಿಳೆ. ಕುತ್ತಿಗೆ, ತಲೆ ಮತ್ತು ಕೈಕಾಲುಗಳಿಗೆ 15 ಬಾರಿ ಇರಿದು ಮಾಜಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಲ್ಬರ್ಟ್ ಮಾರ್ಗನ್ (41) ಕೊಲೆ ಆರೋಪಿ. ಕಾನೂನು ಸಲಹೆಗಾರನಾದ ಮಾರ್ಗನ್, ರಷ್ಯಾದ ವಿಮಾನಯಾನ ಸಂಸ್ಥೆ ಪೊಬೆಡಾದಲ್ಲಿ ಕೆಲಸ ಮಾಡುತ್ತಿದ್ದ ಅನಸ್ತಾಸಿಯಾಳನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ. ನಂತರ ಆಕೆಯಿಂದ ಬೇರ್ಪಟ್ಟಿದ್ದ. ಮಾರ್ಗನ್ ತನ್ನ ಮಾಜಿ ಪತ್ನಿಯ ಖಾಸಗಿ ಸಂದೇಶಗಳನ್ನು ಪರಿಶೀಲಿಸಿದ್ದ. ವಿಮಾನ ಸಿಬ್ಬಂದಿಯಾಗಿದ್ದ ಆಕೆ ಎಸ್ಕಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾಳೆಂದು ತಿಳಿದು, ರಷ್ಯಾದಿಂದ ಯುಎಇಗೆ ಸುಮಾರು 2,700 ಮೈಲುಗಳಷ್ಟು ಪ್ರಯಾಣ ಬೆಳೆಸಿದ್ದ. ಹೋಟೆಲ್‌ಗೆ ಬಂದು ಮಾಜಿ ಪತ್ನಿಗೆ ಇರಿದು ಹತ್ಯೆ ಮಾಡಿದ್ದಾನೆ.
ಮಾರ್ಗನ್ ಈ ಹಿಂದೆ ಮಾದಕವಸ್ತು ಸೇವನೆ ಆರೋಪದ ಮೇಲೆ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ. ಮಾಜಿ ಪತ್ನಿ ಜೊತೆ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಮಾರ್ಗನ್‌ ವಿರುದ್ಧದ ಎಲ್ಲಾ ದೂರುಗಳನ್ನು ಹಿಂಪಡೆಯಲು ಅನಸ್ತಾಸಿಯಾ ನಿರ್ಧರಿಸಿದ್ದಳು ಎಂದು ತಿಳಿದುಬಂದಿದೆ.

 

Leave a Reply

Your email address will not be published. Required fields are marked *

error: Content is protected !!