ಉದಯವಾಹಿನಿ, ಬೆಳಗಾವಿ: ಪ್ರೇಯಸಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಸ್ನೇಹಿತನನ್ನು ಆಕೆಯ ಮುಂದೆಯೇ ವಿವಸ್ತ್ರಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕೋಡಿ ಪಟ್ಟಣದ ನಿವಾಸಿ ಪ್ರದೀಪ್ ನಾಯಕ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ಅ.22ರಂದು ನಡೆ ಮಹೇಶವಾಡಿ ಗ್ರಾಮದ ತುಕಾರಾಮ್ ಶಿಂಘೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಇದಿಗ ಎರಡು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಮೃತ ಯುವಕನ ಗುರುತು ಸಿಗದಿದ್ದಾಗ ಫಿಂಗರ್ ಪ್ರಿಂಟ್ ಪಡೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಮೃತದೇಹದ ಕೈಯಲ್ಲಿದ್ದ ಟ್ಯಾಟೋ ಮತ್ತು ಫಿಂಗರ್ ಪ್ರಿಂಟ್ ಆಧಾರದ ಮೇಲೆ ಪೊಲೀಸರು ಗುರುತು ಪತ್ತೆ ಹಚ್ಚಿದ್ದರು. ತುಕಾರಾಮ್ ರೈಲು ನಿಲ್ದಾಣದಲ್ಲಿ ಬಾಟಲ್ ಆರಿಸುವ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಕೊಲೆಗೂ ಮುನ್ನ ತುಕಾರಾಮ್ ಜೊತೆಗೆ ಆರೋಪಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನೂ ತುಕಾರಾಮ್ ಕೊಲೆಗೂ ಮುನ್ನ ಸ್ನೇಹಿತ ಆರೀಫ್ ಜೊತೆಗೆ ಬಾರ್‌ನಲ್ಲಿ ಪ್ರದೀಪ್ ಪಾರ್ಟಿ ಮಾಡಿದ್ದ. ಬಂಧನಕ್ಕೊಳಗಾದ ಆರೋಪಿ ಮತ್ತೊಂದು ಕೊಲೆಯಲ್ಲೂ ಭಾಗಿಯಾಗಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
