ಉದಯವಾಹಿನಿ, ಬೆಂಗಳೂರು: ಗ್ಯಾರಂಟಿಗಾಗಿ ಹಣ ಹೊಂದಿಸಲು ಪರದಾಡುತ್ತಿರೋ ಸರ್ಕಾರ ಇದೀಗ ಮದ್ಯದಂಗಡಿಗಳ ಮೂಲಕ ಹಣ ಕ್ರೂಢೀಕರಣಕ್ಕೆ ಕೈ ಹಾಕಿದೆ. ರಾಜ್ಯದ್ಯಾಂತ ಬರೋಬ್ಬರಿ 569 ಮದ್ಯದಂಗಡಿಗಳ ಇ-ಹರಾಜು ಲೈಸೆನ್ಸ್ ಪ್ರಕ್ರಿಯೆ ಶುರುವಾಗಿದ್ದು, ಅಬಕಾರಿ ಇಲಾಖೆಯಿಂದ ) ಮೊದಲ ಹಂತವಾಗಿ ಇ-ಹರಾಜಿನ ತರಬೇತಿ ಕಾರ್ಯಾಗಾರ ನಡೆಸಲಾಗಿದೆ.ಇ-ಹರಾಜು ಪ್ರಕ್ರಿಯೆಯಿಂದ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ 700 ಕೋಟಿಯಿಂದ 1 ಸಾವಿರ ಕೋಟಿವರೆಗೂ ಆದಾಯದ ನಿರೀಕ್ಷೆಯಿದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಒಂದು ಲೈಸೆನ್ಸ್‌ಗೆ 70 ಲಕ್ಷದಿಂದ ಒಂದೂವರೆ ಕೋಟಿಯಷ್ಟು ದರ ನಿಗದಿಯಾಗಿದೆ. ಐದು ವರ್ಷದವರೆಗೆ ಲೈಸೆನ್ಸ್ ಅನ್ನು ಅಬಕಾರಿ ಇಲಾಖೆ ನೀಡಲಿದೆ. 569 ಲೈಸೆನ್ಸ್‌ಗಳ ಪೈಕಿ, ಬೆಂಗಳೂರಿನಲ್ಲೇ ಶೇ.30ರಷ್ಟು ಲೈಸೆನ್ಸ್ ಹಂಚಿಕೆಯಾಗಲಿವೆ. ಸ್ಥಗಿತಗೊಂಡಿರುವ ಹಾಗೂ ಹಂಚಿಕೆಯಾಗದೇ ಇರುವ ಸಿಎಲ್-2 ಮತ್ತು ಸಿಎಲ್-11ಸಿ ಸನ್ನದುಗಳ ಹರಾಜು ನಡೆಯಲಿದೆ. ಕರ್ನಾಟಕದಲ್ಲಿ ಹೆಚ್ಚುವರಿ ಮದ್ಯದಂಗಡಿಗಳು ಬೇಡ ಅಂತಾ ಮಹಿಳೆಯರ ವಿರೋಧದ ಮಧ್ಯೆಯೇ ಸರ್ಕಾರ ಕ್ಯಾರೆ ಎನ್ನದೇ ಇ-ಹರಾಜು ಪ್ರಕ್ರಿಯೆ ಯೋಜನೆ ರೂಪಿಸಿದೆ.
