ಉದಯವಾಹಿನಿ, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಗಾಳಿ ಜೋರಾಗಿ ಬೀಸುತ್ತಿದೆ. ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಶಿವರಾಜ್‌ಕುಮಾರ್ ಅಭಿನಯದ `45′ ಸಿನಿಮಾ ಕೂಡ ತೆರೆಕಂಡಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ಬಳಿಕ ಮಾಧ್ಯಮಗಳ ಜೊತೆ ಶಿವಣ್ಣ ಮಾತನಾಡಿದ್ದಾರೆ. ಫ್ಯಾನ್ಸ್ ವಾರ್ ಕುರಿತು ಅವರು ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು. ಯಾರ ಭಾವನೆಗಳ ಜೊತೆಗೂ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ಸಮಾಜ ಇಷ್ಟೇ. ಎಷ್ಟು ದಿನ ಇರುತ್ತೇವೆ, ಅಷ್ಟು ದಿನ ನಾವೆಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು’ ಎಂದು ನಟ ಶಿವರಾಜ್‌ಕುಮಾರ್ ನುಡಿದಿದ್ದಾರೆ.
ರಾಜ್ಯಾದ್ಯಂತ ತಮ್ಮ `45′ ಚಿತ್ರ ತೆರೆಕಂಡಿದೆ. ಒಂದೇ ಸಿನಿಮಾದಲ್ಲಿ ಮೂವರು ನಟರು ಅಭಿನಯಿಸಿದ್ದಾರೆ. ಈ ವೇಳೆ ಫ್ಯಾನ್ಸ್ ವಾರ್ ಬಗ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೂ ಮೆಸೇಜ್ ಪಾಸ್ ಮಾಡಿದ್ದಾರೆ ಶಿವರಾಜ್‌ಕುಮಾರ್. ಇನ್ನು ಮುಂದಾದರೂ ಫ್ಯಾನ್ಸ್ ವಾರ್‌ಗೆ ತೆರೆ ಬೀಳುತ್ತಾ ಕಾದು ನೋಡಬೇಕಿದೆ.
