
ಉದಯವಾಹಿನಿ, ಬಿಗ್‌ಬಾಸ್ ಗಿಲ್ಲಿನಟ ತಂಟೆ, ತರಲೆ ಮಾತುಗಳಿಂದ ಅನೇಕರನ್ನು ರಂಜಿಸುತ್ತಿದ್ದಾರೆ. ಗಿಲ್ಲಿಯ ಈ ನಡವಳಿಕೆ ಕೆಲವರಿಗೆ ಹಿತವೆನಿಸಿದ್ರೆ ಇನ್ನೂ ಹಲವರಿಗೆ ಕಷ್ಟವೆನಿಸುತ್ತದೆ. ಗಿಲ್ಲಿ ಮೇಲೆ ಯಾರಿಗೆ ಎಷ್ಟೇ ಕೋಪ ಇದ್ರೂ ಹೊಡಿಬೇಕು ಅನ್ನೋವಷ್ಟು ಕೋಪ ಇದ್ರೂ ಹೊಡೆಯಲು ಸಾಧ್ಯವಾಗಲ್ಲ. ಹಾಗೆ ಹೊಡೆಯುವಂತೆಯೂ ಇಲ್ಲ. ಆದರೆ ಮನೆಗೆ ಧಿಡೀರ್ ಎಂಟ್ರಿ ಕೊಟ್ಟ ಗಿಲ್ಲಿನಟನ ತಂದೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಮಗನಿಗೆ ಕೋಲಲ್ಲಿ ಹಿಗ್ಗಾಮಗ್ಗಾ ಬಾರಿಸಿದ್ದಾರೆ.
ಅಂದಹಾಗೆ ಗಿಲ್ಲಿನಟನಿಗೆ ಅವರ ತಂದೆ ಹೊಡೆದಿರುವುದು ತಮಾಷೆಗಾಗಿ ಅಷ್ಟೇ. `ಕುರಿಯೊಂದು ತಪ್ಪಿಸಿಕೊಂಡು ಬಂದಿದೆ’ ಎಂದು ಹೇಳುತ್ತಾ ಮಗನನ್ನು ನೋಡಿದೊಡನೆ ತಮಾಷೆಯಿಂದ ನಾಲ್ಕೇಟು ಬಾರಿಸಿದ್ದಾರೆ. ಈ ಕುರಿತು ಪ್ರೋಮೋ ರಿಲೀಸ್ ಆಗಿದೆ. ಬಿಗ್‌ಬಾಸ್ ಮನೆಗೆ ಗಿಲ್ಲಿನಟನ ತಂದೆ ತಾಯಿ ಆಗಮಿಸಿದ್ದಾರೆ. ಈ ವೇಳೆ ಮಗನ ಜೊತೆ ಗಿಲ್ಲಿ ತಂದೆ ತಾಯಿ ತಮಾಷೆಯಿಂದ ಮಾತನಾಡುತ್ತಾ ಕಾಲ ಕಳದಿದ್ದಾರೆ. ಮಗನಿಗೆ ಸ್ನಾನ ಮಾಡಿಸಿ ತಲೆಬಾಚಿ ಒಳ್ಳೆ ಬಟ್ಟೆ ಹಾಕಿದ್ದಾರೆ ಗಿಲ್ಲಿ ಅಪ್ಪ ಅಮ್ಮ. ಈ ಕುರಿತ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದೀಗ ಬಿಗ್‌ಬಾಸ್‌ನಲ್ಲಿ ಫ್ಯಾಮಿಲಿ ರೌಂಡ್ಸ್ ನಡೆಯುತ್ತಿದ್ದು, ಈಗಾಗ್ಲೇ ಧನುಷ್, ರಾಶಿಕಾ, ಅಶ್ವಿನಿ, ರಕ್ಷಿತಾ ಕುಟುಂಬಸ್ಥರು ಮನೆಗೆ ಆಗಮಿಸಿ ಮಕ್ಕಳ ಖುಷಿಗೆ ಕಾರಣರಾದ್ರು. ಇದೀಗ ಗಿಲ್ಲಿನಟನ ಕುಟುಂಬಸ್ಥರು ಎಂಟ್ರಿ ಕೊಡುವ ಸರದಿ ಬಂದಿತ್ತು. ಬಂದೊಡನೆಗೆ ಗಿಲ್ಲಿ ರೀತಿಯೇ ಗಿಲ್ಲಿ ಅಪ್ಪ ಅಮ್ಮ ಸಖತ್ ಮನರಂಜನೆ ಕೊಟ್ಟಿದ್ದಾರೆ. ಗಿಲ್ಲಿ ಕೂಡ ಅಪ್ಪ ಅಮ್ಮನ ಜೊತೆ ಜೋಕ್ ಮಾಡುತ್ತಾ ಭಾರಿ ಮನರಂಜನೆ ಕೊಡುತ್ತಾರೆ
