ಉದಯವಾಹಿನಿ, ಎಲ್ಲಾ ಹಬ್ಬಗಳನ್ನು ಮನೆಯಲ್ಲಿ ವಿಶೇಷವಾಗಿ ಆಚರಿಸುವಂತೆ ನಟಿ ರಾಧಿಕಾ ಪಂಡಿತ್ ಪ್ರತಿ ವರ್ಷ ಕ್ರಿಸ್‌ಮಸ್ ಹಬ್ಬವನ್ನ ಆಚರಿಸುತ್ತಾರೆ. ಹೀಗೆ ಈ ವರ್ಷವೂ ಮನೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನ ಆಚರಿಸಿದ್ದಾರೆ. ಕೇಕ್ ಮಾಡಿ, ಮನೆಯೊಳಗೆ ಕ್ರಿಸ್‌ಮಸ್ ಗಿಡ ಇಟ್ಟು, ಅದಕ್ಕೆ ಲೈಟ್ ಹಾಗೂ ಬೆಲ್‌ಗಳಿಂದ ಸಿಂಗರಿಸಿದ್ದಾರೆ. ಇದೀಗ ಮನೆಯೊಳಗೆ ಕ್ರಿಸ್‌ಮಸ್ ಟ್ರೀ ಇಟ್ಟು ಸಿಂಗರಿಸಿರುವ ಫೋಟೋಗಳನ್ನಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಪತಿ ಯಶ್‌ಗಾಗಿ ಕಾಯ್ತಿರೋದಾಗಿ ಹೇಳಿದ್ದಾರೆ. ಮಕ್ಕಳಾದ ಐರಾ ಹಾಗು ಯಥರ್ವ್ ಜೊತೆ ಟ್ವಿನ್ನಿಂಗ್ ಡ್ರೆಸ್‌ನಲ್ಲಿ ಕಾಣಿಸ್ಕೊಂಡು ಕ್ರಿಸ್‌ಮಸ್ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿ ಸಿಂಗರಿಸಿ ಸಾಂತಾಕ್ಲಾಸ್ ಬರೋದನ್ನೇ ಕಾಯೋದು ವಾಡಿಕೆ. ಅದೇ ರೀತಿ ರಾಧಿಕಾ ತಮ್ಮ ಮನೆಯಲ್ಲಿ ಕ್ರಿಸ್‌ಮಸ್ ಟ್ರೀ ಇಟ್ಟು, ಡಾಡಾಕ್ಲಾಸ್‌ಗಾಗಿ ಕಾಯ್ತಿರೋದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ ಇಲ್ಲಿ ಡಾಡಾಕ್ಲಾಸ್ ಅಂದ್ರೆ ಯಶ್. ಟಾಕ್ಸಿಕ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಿದ್ದು, ಮನೆಯಲ್ಲಿ ಕುಟುಂಬ ಸಮೇತ ಕ್ರಿಸ್‌ಮಸ್ ಹಬ್ಬಕ್ಕಾಗಿ ಕಾಯ್ತಿರೋದಾಗಿ ತಿಳಿಸಿದ್ದಾರೆ.
