ಉದಯವಾಹಿನಿ, ಚಳಿಗಾಲ ಆಗಿದ್ದರಿಂದ ಈಗ ಹಣ್ಣುಗಳನ್ನು ತಿನ್ನಬೇಕು ಎಂದರೆ ಹಿಂದೆ ಮುಂದೆ ಯೋಚನೆ ಮಾಡಬೇಕು ಆಗುತ್ತದೆ. ಶೀತವಾಗದಂತೆ ಎಚ್ಚರಿಕೆ ವಹಿಸಿ ಹಣ್ನನ್ನು ತಿನ್ನಬೇಕು. ಆದರೆ ಯಾವ ಹಣ್ಣು ತಿನ್ನಬೇಕು ಎನ್ನುವುದು ಸರಿಯಾಗಿ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಇಲ್ಲೊಂದು ಅದ್ಭುತವಾದ ಮಾಹಿತಿ ಇದೆ. ಚಳಿಗಾಲದಲ್ಲಿ ಸೀಬೆ ಅಥವಾ ಪೇರಳೆ ಹಣ್ಣನ್ನು ತಿನ್ನುವುದು ಉತ್ತಮ ಏಕೆಂದರೆ ಇದು ಅತಿ ಹೆಚ್ಚು ಪ್ರೋಟೀನ್ ಅಂಶ ಹೊಂದಿದೆ. ಈ ಹಣ್ಣು ವಿಟಮಿನ್ ಸಿ, ಫೈಬರ್‌ನಲ್ಲಿಯೂ ಸಮೃದ್ಧವಾಗಿದೆ. ಸೀಬೆ ಹಣ್ಣು ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಷಿಯಂ, 5 ಗ್ರಾಂನಷ್ಟು ಫೈಬರ್, 3 ಗ್ರಾಂನಷ್ಟು ಪ್ರೋಟೀನ್ ಹೊಂದಿದೆ. ಈ ಹಣ್ಣು ಎಲ್ಲ ಕಡೆಯೂ ಸಮಾನ್ಯವಾಗಿ ದೊರೆಯುತ್ತದೆ.
ಸೀಬೆ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಬಹುದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹಾಗೂ ಫೈಬರ್ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದರ ಎಲೆಗಳ ಮೂಲಕ ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಬಹುದಾಗಿದೆ. ಸೀಬೆ ಎಲೆಯ ಚಹಾ ಕುಡಿಯುವುದರಿಂದ ಮಧುಮೇಹಿಗಳಿಗೆ ಊಟ ನಂತರದ ಸಕ್ಕರೆ ಪ್ರಮಾಣ ಶೇ. 10 ರಷ್ಟು ಕಡಿಮೆ ಆಗುತ್ತದೆ. ಹೃದಯದ ಆರೋಗ್ಯವನ್ನು ಪೇರಳೆ ಹಣ್ಣುಗಳು ಬೆಂಬಲಿಸುತ್ತವೆ. ಉತ್ಕರ್ಷಣ ನಿರೋಧಕಗಳು ರಾಡಿಕಲ್ ಹಾನಿಯಿಂದ ಹೃದಯವನ್ನು ರಕ್ಷಣೆ ಮಾಡುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಪೇರಳೆ ಆರೋಗ್ಯಕರ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಈ ಹಣ್ಣಿನಲ್ಲಿರುವ ಫೈಬರ್ ಮಲಬದ್ಧತೆಯನ್ನು ನಿವಾರಿಸುತ್ತದೆ.
