ಉದಯವಾಹಿನಿ, ಜೆರುಸಲೇಂ : ಈಶಾನ್ಯ ಲೆಬನಾನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಮಿಲಿಟಿರಿ ಪಡೆ ಕುದ್ಸ್ ಫೋರ್ಸ್‌ನ ಹಿರಿಯ ಕಮಾಂಡರ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಮತ್ತು ಶಿನ್ ಬೆಟ್ ಭದ್ರತಾ ಸಂಸ್ಥೆ ಘೋಷಿಸಿವೆ. ಮೃತ ಹುಸೇನ್ ಮಹಮೂದ್ ಮಾರ್ಷದ್ ಅಲ್-ಜವಾಹರಿ ) ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ವಿಭಾಗ ಕುದ್ಸ್ ಪಡೆಯ ಕಾರ್ಯಾಚರಣೆ ಘಟಕದಲ್ಲಿ ಉನ್ನತ ಕಮಾಂಡರ್ ಆಗಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆ ಮತ್ತು ಶಿನ್ ಬೆಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸಿರಿಯಾದ ಗಡಿಗೆ ಹೋಗುವ ರಸ್ತೆಯಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಟ್ರಕ್‌ನಲ್ಲಿದ್ದ ಹುಸೇನ್ ಮಹಮೂದ್ ಮಾರ್ಷದ್ ಅಲ್-ಜವಾಹರಿ ಮತ್ತು ಅವರ ಸಹವರ್ತಿ ಸಾವನ್ನಪ್ಪಿರೆ ಎಂದು ಲೆಬನಾನ್‌ನ ಸುದ್ದಿ ಸಂಸ್ಥೆ ಈ ಹಿಂದೆ ವರದಿ ಮಾಡಿತ್ತು. ಇದೀಗ ಇಸ್ರೇಲ್ ಈ ಸುದ್ದಿಯನ್ನು ದೃಢಪಡಿಸಿದೆ. ಅಲ್-ಜವಾಹರಿಯ ಜತೆ ಮೃತಪಟ್ಟ ಕಾರ್ಯಕರ್ತ ಮಜೀದ್ ಕನ್ಸೌವಾ ಎಂದು ಹೇಳಿದೆ. ಸದ್ಯ ಇಸ್ರೇಲ್ ನಡೆಸಿದ ದಾಳಿಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
