ಉದಯವಾಹಿನಿ, ಢಾಕಾ: ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ಯುವಕರ ಹತ್ಯೆ ಸೇರಿ 2,900 ಹಿಂದೂಗಳ ಮೇಲೆ ದೌರ್ಜನ್ಯದ ಬಳಿಕ ಕೊನೆಗೂ ಭಾರತ ಸರ್ಕಾರ ಎಚ್ಚೆತ್ತುಕೊಂಡಿದ್ದು, ಉಗ್ರವಾಗಿ ಖಂಡಿಸಿದೆ. ನೆರೆ ದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದರೂ ಭಾರತ ಸರ್ಕಾರ ಮೌನ ವಹಿಸಿದೆ ಅನ್ನೋ ಟೀಕೆಗಳಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ, ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿ ನಡೆಸಿ, ಹಿಂದೂಗಳ ಮೇಲೆ 2,900 ದೌರ್ಜನ್ಯಗಳು ಆಗಿವೆ ಎಂದು ಹೇಳಿದ್ದಾರೆ.
ಹಿಂದೂಗಳು, ಕ್ರೈಸ್ತರು, ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಉಗ್ರಗಾಮಿಗಳು ನಡೆಸುತ್ತಿರುವ ನಿರಂತರ ಹಗೆತನ ಖಂಡನೀಯವಾದದ್ದು.

ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಿಸೋಕೆ ಆಗಲ್ಲ. ಭಾರತವು ಸೂಕ್ಷ್ಮ ನಿಗಾ ಇರಿಸಿದೆ. ಬಾಂಗ್ಲಾದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಅಂತ ಭಾರತವೂ ಬಯಸುತ್ತದೆ. ಹಿಂದೂ ಯುವಕನ ಭೀಕರ ಹತ್ಯೆಯನ್ನ ನಾವು ಖಂಡಿಸುತ್ತೇವೆ. ಅಪರಾಧಿಗಳನ್ನ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ ಅಂದಿದ್ದಾರೆ.ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ನಿರಂತರ ಹಗೆತನವು ಗಂಭೀರ ಕಳವಳಕಾರಿಯಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!