ಉದಯವಾಹಿನಿ, ಜೋಡಿಹಕ್ಕಿಗಳಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹೊಸ ವರ್ಷಾರಂಭವನ್ನ ವಿದೇಶದಲ್ಲಿ ಕಳೆಯಲು ಈಗಾಗಲೇ ವಿದೇಶಕ್ಕೆ ತೆರಳಿದ್ದಾರೆ. ಇದೀಗ ವಿದೇಶದಿಂದಲೇ ರಶ್ಮಿಕಾ ಮಂದಣ್ಣ ಕ್ರಿಸ್‌ಮಸ್‌ಗೆ ಶುಭ ಹಾರೈಸಿ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಫೋಟೋ ತೆಗೆದಿದ್ದು, ವಿಜಯ್ ದೇವರಕೊಂಡನಾ ಎಂದು ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.
ಕಳೆದ ಎರಡು ದಿನದ ಹಿಂದಷ್ಟೇ ರಶ್ಮಿಕಾ ಹಾಗೂ ವಿಜಯ್ ಹೈದ್ರಾಬಾದ್‌ನಿಂದ ವಿದೇಶ ಪ್ರಯಾಣ ಮಾಡಿದ್ದರು. ಇಬ್ಬರೂ ಒಟ್ಟಿಗೆ ಕಾಣಿಸ್ಕೊಂಡಿಲ್ಲ. ಆದರೆ, ಒಂದೇ ಸಮಯಕ್ಕೆ ಕಾಣಿಸ್ಕೊಂಡಿದ್ದಾರೆ. ಹೀಗೆ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸದೇ ನೋಡುಗರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಆದರೆ, ವಿದೇಶದಲ್ಲಿ ಫೋಟೋ ಪೋಸ್ಟ್ ಮಾಡುವುದನ್ನ ಮಾತ್ರ ಮರೆಯುವುದಿಲ್ಲ.
ಇದೀಗ ವಿದೇಶದಲ್ಲಿ ವರ್ಷದ ಕೊನೆಯನ್ನ ಎಂಜಾಯ್ ಮಾಡ್ತಿರೋ ಜೋಡಿ ಇದುವರೆಗೂ ಹೆಚ್ಚಿನ ಫೋಟೋಗಳನ್ನ ರಿವೀಲ್ ಮಾಡಿಲ್ಲ. ವಿಜಯ್ ದೇವರಕೊಂಡ ಸೀಕ್ರೆಟ್ ಕಾಪಾಡಿಕೊಂಡಿದ್ರೆ ರಶ್ಮಿಕಾ ಆಲ್‌ರೆಡಿ ಫೋಟೋ ಪೋಸ್ಟ್ ಮಾಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರಾ ವಿಜಯ್ ಇನ್‌ಸ್ಟಾಗ್ರಾಂ ಫೋಟೋಗಳನ್ನ ನೋಡಲು ಕಾದು ಕುಳಿತಿದ್ದಾರೆ. ಹೀಗೆ ವಿಜಯ್ ರಶ್ಮಿಕಾ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.
