ಉದಯವಾಹಿನಿ, ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಬಿಡುವಿನ ಸಮಯದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಕಡ್ಡಾಯವಾಗಿ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಹಾಗಾಗಿ ಆಧುನಿಕ ಕ್ರಿಕೆಟ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 15 ವರ್ಷಗಳ ದೇಶಿ ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ಅವರು ಇತ್ತೀಚೆಗೆ ದೆಹಲಿ ತಂಡದ ಪರ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ 2025-26) ಟೂರ್ನಿಯ ಎರಡು ಪಂದ್ಯಗಳನ್ನು ಆಡಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೈದಾನದಲ್ಲಿ ಆಂಧ್ರ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 131 ರನ್‌ಗಳನ್ನು ಬಾರಿಸಿದ್ದರು. ನಂತರ ಗುಜರಾತ್ ವಿರುದ್ದದ ಎರಡನೇ ಸುತ್ತಿನ ಪಂದ್ಯದಲ್ಲಿ 77 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ದೆಹಲಿ ತಂಡದ ಗೆಲುವಿಗೆ ನೆರವು ನೀಡಿದ್ದರು.
ಅಂದ ಹಾಗೆ ದೆಹಲಿ ಪರ ಎರಡು ಪಂದ್ಯಗಳನ್ನು ಆಡಿದ ಬಳಿಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಸರಣಿಗೆ ತಯಾರಿ ನಡೆಸಲಿದ್ದಾರೆಂದು ಹೇಳಲಾಗಿತ್ತು. ಆದರೆ, ಅವರು ಇದೀಗ ದೆಹಲಿ ಪರ ಮೂರನೇ ಪಂದ್ಯವನ್ನು ರೈಲ್ವೇಸ್ ವಿರುದ್ಧ ಆಡಲಿದ್ದಾರೆಂದು ವರದಿಯಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲನೇ ಏಕದಿನ ಪಂದ್ಯ ಜನವರಿ 11 ರಂದು ನಡೆಯಲಿದೆ. ಈ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ. ಹಾಗಾಗಿ ಇದಕ್ಕೂ ಮುನ್ನ ಅವರು ಜನವರಿ 6 ರಂದು ರೈಲ್ವೇಸ್ ಆಡಲಿದ್ದಾರೆಂದು ವರದಿಯಾಗಿದೆ.
ದೆಹಲಿ ತಂಡದ ಪರ ವಿರಾಟ್ ಕೊಹ್ಲಿ ಎರಡು ಪಂದ್ಯಗಳನ್ನು ಮುಗಿಸಿದ್ದಾರೆ ಹಾಗೂ ಅವರು ತಂಡವನ್ನು ತೊರೆದಿದ್ದಾರೆ. ಆದರೆ, ಅವರ ಕಿಟ್ ಹಾಗೂ ಜೆರ್ಸಿ ದೆಹಲಿ ತಂಡದಲ್ಲಿಯೇ ಇದ್ದು, ಅವರು ಮತ್ತೊಂದು ಪಂದ್ಯಕ್ಕೆ ಮರಳಿದ್ದಾರೆಂದು ಹೇಳಲಾಗುತ್ತಿದೆ. ಅಂದ ಹಾಗೆ ಕಿವೀಸ್ ಎದುರಿನ ಏಕದಿನ ಸರಣಿಗೂ ಮುನ್ನ ಬಿಸಿಸಿಐ ಯಾವ ರೀತಿ ಯೋಜನೆಯನ್ನು ಹಾಕಿಕೊಳ್ಳಲಿದೆ ಎಂಬುದರ ಮೇಲೆ ಇದು ನಿರ್ಣಯವಾಗಲಿದೆ. ಒಂದು ವೇಳೆ ವಿರಾಟ್ ಕೊಹ್ಲಿಗೆ ಅವಕಾಶ ಸಿಕ್ಕರೆ, ಅವರು ಜನವರಿ6 ರಂದು ರೈಲ್ವೇಸ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ.
