ಉದಯವಾಹಿನಿ, ಮೆಲ್ಬರ್ನ್‌: ಆಸ್ಟ್ರೇಲಿಯಾ ತವರಿನಲ್ಲಿ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಐತಿಹಾಸ ನಿರ್ಮಿಸಿದೆ. ಬರೋಬ್ಬರಿ 5,468 ದಿನಗಳ ಬಳಿಕ ಆಸೀಸ್‌ ನೆಲದಲ್ಲಿ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಹೌದು. ಮೆಲ್ಬರ್ನ್‌ (Melbourne) ಕ್ರಿಕೆಟ್‌ ಮೈದಾನದಲ್ಲಿ ನಡೆದ ಆಶಸ್‌ ಟೂರ್ನಿಯ ಬಾಕ್ಸಿಂಗ್‌ ಡೇ 4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. 175 ರನ್‌ಗಳ ಗುರಿ ಪಡೆದ ಇಂಗ್ಲೆಂಡ್‌ 32.2 ಓವರ್‌ಗಳಲ್ಲೇ 6 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿ ಗೆಲುವು ಸಾಧಿಸಿದೆ.
ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ ಆತಿಥೇಯ ಆಸ್ಟ್ರೇಲಿಯಾವನ್ನು 152 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಆದ್ರೆ ಆಸೀಸ್‌ ಬೆಂಕಿ ದಾಳಿಗೆ ತತ್ತರಿಸಿದ ಆಂಗ್ಲಪಡೆ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ನಲ್ಲೇ ಕೇವಲ 110 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಮೊದಲ ದಿನವೇ 2ನೇ ಇನ್ನಿಂಗ್ಸ್‌ ಶುರು ಮಾಡಿದ್ದ ಆಸೀಸ್‌ 4 ರನ್‌ಗಳಿಸಿ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿತು.
ಇನ್ನೂ 46 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ಆಸೀಸ್‌ 2ನೇ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಎದುರಾಳಿ ಇಂಗ್ಲೆಂಡ್‌ಗೆ 175 ರನ್‌ ಗುರಿ ನೀಡಿತ್ತು.‌ ಸ್ಪರ್ಧಾತ್ಮಕ ಗುರಿ ಪಡೆದ ಇಂಗ್ಲೆಂಡ್‌ 32 ಓವರ್‌ಗಳಲ್ಲಿ 178 ರನ್‌ ಗಳಿಸಿ ಗುರಿ ತಲುಪಿತು.

ಎರಡೇ ದಿನಕ್ಕೆ 36 ವಿಕೆಟ್‌ ಪತನ: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳ ಕೈಚಳಕವೇ ಮೇಲುಗೈ ಸಾಧಿಸಿತು. ಮೆಲ್ಬರ್ನ್‌ನಲ್ಲಿ ನಡೆದ 4ನೇ ಪಂದ್ಯದಲ್ಲಿ 2 ದಿನದಲ್ಲಿ 36 ವಿಕೆಟ್‌ ಪತನಗೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಪರ ಗಸ್ ಅಟ್ಕಿನ್ಸನ್ 2 ವಿಕೆಟ್‌, ಬ್ರಾಂಡನ್‌ ಕರ್ಸ್‌ 1 ವಿಕೆಟ್‌, ಜೋಶ್ ಟಂಗ್ 5 ವಿಕೆಟ್‌, ಬೆನ್‌ ಸ್ಟೋಕ್ಸ್‌ 1 ವಿಕೆಟ್‌ ಪಡೆದರೆ, ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ 2 ವಿಕೆಟ್‌, ಮೈಕೆಲ್ ನೆಸರ್ 4 ವಿಕೆಟ್‌, ಸ್ಕಾಟ್‌ ಬೊಲೆಂಡ್‌ 3 ವಿಕೆಟ್‌, ಕ್ಯಾಮರೂನ್‌ ಗ್ರೀನ್‌ 1 ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *

error: Content is protected !!