ಉದಯವಾಹಿನಿ, ಕೆಟ್ಟ ಕಾಮೆಂಟ್ಸ್, ಟ್ರೋಲ್‌ಗಳ ವಿರುದ್ಧ ದೂರು ಕೊಟ್ಟಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೀಗ ಇನ್‌ಸ್ಟಾದಲ್ಲಿ ಹೊಸ ಸ್ಟೋರಿಯೊಂದನ್ನ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮಹಿಳೆಯರನ್ನ ಮೀಮ್ಸ್‌ಗಳ ಮೂಲಕ ಟ್ರೋಲ್ ಮಾಡೋದು ಸಾಮಾನ್ಯವಾಗಿದೆ. ಆದರೆ ಮಹಿಳೆ ತುಂಬಾ ಶಕ್ತಿಶಾಲಿʼ ಅಂತಾ ವಿಡಿಯೋದೊಂದಿಗೆ ಹಂಚಿಕೊಂಡಿದ್ದಾರೆ. ಈ ಸಾಲುಗಳೊಂದಿಗೆ ಮಹಿಳೆಯರು ವಿವಿಧ ಸಂದರ್ಭಗಳಲ್ಲಿ ಎದುರಿಸುವ ಕಠಿಣ ಸವಾಲುಗಳ ಭಾವುಕ ವಿಡಿಯೋ ತುಣುಕನ್ನ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಬಿರುಸಿನ ಫ್ಯಾನ್ಸ್‌ವಾರ್ ನಡೆಯುತ್ತಿದೆ. ಇದು ವಿಪರೀತಕ್ಕೆ ತಿರುಗಿದ್ದು ಕುಟುಂಬವನ್ನೇ ಎಳೆದು ತಂದು ಟ್ರೋಲ್ ಮಾಡಲಾಗುತ್ತಿದೆ. ಒಂದ್ಕಡೆ ವಿಜಯಲಕ್ಷ್ಮಿ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಇನ್ನೊಂದ್ಕಡೆ ಸುದೀಪ್ ಪುತ್ರಿಗೂ ಕೆಟ್ಟ ಕಾಮೆಂಟ್ಸ್ ಮಾಡುವುದರ ಜೊತೆ ಟ್ರೋಲಿಗೆಳೆಯಲಾಗುತ್ತಿದೆ.
ಈ ನಡುವೆ `ಮಾರ್ಕ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಿಚ್ಚ, ಮಗಳಿಗೆ ಕೆಟ್ಟ ಕಮೆಂಟ್ಸ್ ಮಾಡೋವ್ರಿಗೆ ತಲೆ ಕೆಡಿಸಿಕೊಳ್ಳಲ್ಲ ಅಂತ ಹೇಳಿದ್ದಾರೆ. ಜೊತೆಗೆ ವಿಜಯಲಕ್ಷ್ಮಿ ಪೋಸ್ಟ್ ಮೂಲಕ ಹೇಳಿದ್ದ `ಕ್ಲಾಸ್ ಫ್ಯಾನ್ಸ್’ ಟೀಕೆಗೆ ತಿರುಗೇಟು ಕೊಟ್ಟಿದ್ರು. ಸುದ್ದಿಗೋಷ್ಟಿ ನಡೆದ ಕೆಲವೇ ಹೊತ್ತಿಗೆ ವಿಜಯಲಕ್ಷ್ಮಿ ಮಹಿಳೆಯರನ್ನ ಟ್ರೋಲ್ ಮಾಡ್ತಿರೋ ವಿಚಾರವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
