ಉದಯವಾಹಿನಿ, ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ತಂಡದಿಂದ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಚಿತ್ರತಂಡವು ಅಭಿಮಾನಿಗಳ ಸಮ್ಮುಖದಲ್ಲಿ ಸಿನಿಮಾ ಬಗ್ಗೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರೆಬೆಲ್ ಸ್ಟಾರ್ ಪ್ರಭಾಸ್ ಮಾತನಾಡಿ, ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ನಿರ್ದೇಶಕ ಮಾರುತಿ ಅವರ ಬರವಣಿಗೆಗೆ ನಾನು ಕ್ಲೈಮ್ಯಾಕ್ಸ್ ನೋಡಿದ ನಂತರ ಅಭಿಮಾನಿಯಾದೆ. ಈ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ, ಅದರ ಜೊತೆಗೆ ‘ದಿ ರಾಜಾ ಸಾಬ್’ ಕೂಡ ಬ್ಲಾಕ್‌ಬಸ್ಟರ್ ಆಗಲಿ” ಎಂದು ಆಶಿಸಿದರು. ಅಲ್ಲದೆ, ಡಿ. 29 ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು.

“ಮಾರುತಿ ಅವರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಅದನ್ನು ಅವರು ಪೆನ್ನಿನಿಂದ ಬರೆದಿದ್ದಾರೋ ಅಥವಾ ಮೆಷಿನ್ ಗನ್‌ನಿಂದ ಬರೆದಿದ್ದಾರೋ ಎಂಬಂತೆ ಪವರ್‌ಫುಲ್ ಆಗಿದೆ. 15 ವರ್ಷಗಳ ನಂತರ ಅಭಿಮಾನಿಗಳು ನನ್ನಿಂದ ಬಯಸುವ ‘ಡಾರ್ಲಿಂಗ್’ ಶೈಲಿಯ ಪೂರ್ಣ ಪ್ರಮಾಣದ ಮನರಂಜನೆ ಈ ಚಿತ್ರದಲ್ಲಿದೆ” ಎಂದರು. ಅಲ್ಲದೆ ಹಿರಿಯ ನಟಿ ಜರೀನಾ ವಹಾಬ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನಾನು 11 ಸಿನಿಮಾಗಳನ್ನು ಮಾಡಿದ್ದೇನೆ, ಆದರೆ ಪ್ರಭಾಸ್ ಅವರು ನನಗೆ ‘ರೆಬೆಲ್ ಯೂನಿವರ್ಸಿಟಿ’ಯಲ್ಲಿ ದೊಡ್ಡ ಮಟ್ಟದ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಎಮೋಷನಲ್ ದೃಶ್ಯಗಳನ್ನು ನೋಡುವಾಗ ನನ್ನ ಕಣ್ಣಲ್ಲೇ ನೀರು ಬಂದಿದೆ.

 

Leave a Reply

Your email address will not be published. Required fields are marked *

error: Content is protected !!