ಉದಯವಾಹಿನಿ, ಕೊರಿಯನ್ ಪಾಪ್ ಸಂಸ್ಕೃತಿ ಬಿಂಬಿಸುವ “ಕೆ-ಪಾಪ್” ಮೂಲಕ ಹೊಸ ತಂಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಲು ಮುಂದಾಗಿದೆ. ಕೆ ಪಾಪ್ ಸಂಸ್ಕೃತಿ ಕರ್ನಾಟಕ, ಭಾರತ ಸೇರಿದಂತೆ ಜಗತ್ತಿನ ವಿವಿದ ದೇಶಗಳಲ್ಲಿ ಕೊರಿಯನ್ ಪಾಪ್ ಸಂಸ್ಕೃತಿ ಹೇಗೆಲ್ಲಾ ಪ್ರಭಾವ ಬೀರಿದೆ ಎನ್ನುವುದನ್ನ ತಿಳಿಸುವ ಪ್ರಯತ್ನ ಇದಾಗಿದೆ. ಇಂತಹದೊಂದು ವಿಷಯವನ್ನು ಮುಂದಿಟ್ಡುಕೊಂಡು ನಿರ್ದೇಶಕ ಕೆವಿನ್ ಲೂಕ್ ಮತ್ತವರ ತಂಡ ಹೊಸ ಫ್ಯಾಂಟಸಿ ಕಥೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲು ಮುಂದಾಗಿದೆ.
ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವ ಪ್ರೋಮೋ ಬಿಡುಗಡೆ ಮಾಡಿದೆ. ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.ನಿರ್ದೇಶಕ ಕೆವಿನ್ ಲೂಕ್, ಜೀವನದ ಆಸೆ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ಸಮಯದಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿ ಮುಂದೆ ಬಂದಾಗ ಆದದ್ದೇ ಕೆ ಪಾಪ್. ಲಾವಣ್ಯ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಶ್ರಮ ಪಟ್ಟು ಒಳ್ಳೆಯ ಸಿನಿಮಾ ನೀಡುವ ಉದ್ದೇಶ ನಮ್ಮದು ಎಂದರು. ಕೊರಿಯನ್ ಪಾಪ್ ಸಂಸ್ಕತಿ ಬಿಂಬಿಸುವ ಚಿತ್ರ ಅವರ ಪ್ರಭಾವವನ್ನು ಭಾರತ ಮತ್ತು ಜಗತ್ತಿನಲ್ಲಿ ಯಾವ ರೀತಿ ಇದೆ ಎನ್ನುವುದನ್ನು ತೋರಿಸಲಾಗುತ್ತಿದೆ. ಇದರೊಂದಿಗೆ ಹಲವು ವಿಷಯಗಳ ಜೊತೆಗೆ ಶನಿಮಹಾತ್ಮ ,ಯಮ ಮಹಾರಾಜ ಬರಲಿದ್ದಾರೆ. ಅವರು ಯಾಕೆ ಬರ್ತಾರೆ. ಜೊತೆಗೆ ಚಿತ್ರದಲ್ಲಿ ಗರುಡರಾಮ್, ವಿಷ್ಣು ಸೇರಿದಂತೆ ಹಲವು ಪಾತ್ರದಾರಿಗಳಿದ್ದಾರೆ ಎಂದರು ಹೇಳಿದ್ದಾರೆ. ಕನಸಿನಲ್ಲಿ ನಡೆಯುವ ಕಥೆ. 60 ದಿನದ ಗಡುವು ಯಾಕೆ ಎನ್ನುವುದು ಕುತೂಹಲದ ಕಥನ. ಪ್ರೋಮೋಗೆ 6 ತಿಂಗಳು ಕೆಲಸ ಮಾಡಿದ್ದೇವೆ.6 ರಿಂದ 7 ವಿಎಫ್ ಎಕ್ಸ್ ಟೀಮ್ ಕೆಲಸ ಮಾಡಿವೆ. 60 ರಿಂದ 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗುವುದು 5 ರಿಂದ 6 ಹಾಡು ಚಿತ್ರದಲ್ಲಿವೆ ಎಂದು ಮಾಹಿತಿ ಹಂಚಿಕೊಂಡರು.
