ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಅಚ್ಚರಿ ಎಲಿಮಿನೇಷನ್ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಅನ್ನುತ್ತಿರುವಾಗಲೇ ಸ್ಪರ್ಧಿಗಳಿಗೆ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಅಂತ ಮೊದಲೇ ಸುಳಿವು ಕೊಟ್ಟಿದ್ದರು, ಸೂರಜ್ ಮನೆಯಿಂದ ಹೊರಹೋಗೊದ್ದರು. ಸಹ ಸ್ಪರ್ಧಿ ಮಾಳು ಹೊರಹೋಗಿದ್ದು, ಸ್ಪಂದನಾ ಸೇಫ್ ಆಗಿದ್ದಾರೆ. ದೊಡ್ಮನೆಗೆ ರಿಟರ್ನ್ ಆಗ್ತಿದ್ದಂತೆ, ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಕಣ್ಣೀರಿಟ್ಟಿದ್ದಾರೆ. ಬಳಿಕ ಬಿಗ್ ಬಾಸ್ ಮಾತನಾಡೋಕೆ ಅವಕಾಶ ನೀಡಿದಾಗ ಕಣ್ಣೀರಿಡುತ್ತಲೇ ಮಾತನಾಡಿದ್ದಾರೆ.
ಬೆಂಗಳೂರಿಗೆ ನಾವು ಬಂದಾಗ ಉಳಿಯೋಕೂ ಜಾಗ ಇರಲಿಲ್ಲ. ಇವತ್ತು ಇಷ್ಟು ದೊಡ್ಡ ಜಾಗಕೊಟ್ಟು ಉಳಿಸಿರೋದಕ್ಕೆ ಬಿಗ್ ಬಾಸ್‌ಗೆ ಥ್ಯಾಂಕ್ಸ್ ಹೇಳ್ತೀನಿ. ನನ್ನನ್ನ ಕಂಟಿನ್ಯೂ ಮಾಡೋಕೆ ವೋಟ್ ಮಾಡಿದವರಿಗೂ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ ಅಂದ್ರು. ಆಮೇಲೆ ನಗು ನಗುತ್ತಾ ಮನೆಯೊಳಗೆ ಸೇರಿಕೊಂಡರು.ಅಲ್ಲದೇ ಧನುಷ್ ಜೊತೆಗೂ ಮಾತನಾಡ್ತಾ…. ಎಷ್ಟೊಂದು ಕಾರಲ್ಲಿ ಕೂತಾಗ ಎಷ್ಟೊಂದು ಭಯ ಆಯ್ತು ಗೊತ್ತಾ ಅಂದ್ರು. ಅದಕ್ಕೆ ಕಿಚಾಯಿಸಿದ ಧನುಷ್, ಈಗೇನ್ ಹೋಗ್ತಿಯಾ? ಹೋಗೋದಾದ್ರೆ ಹೋಗು, ಇಲ್ಲಾ ಅಂದ್ರೆ ಒಳಗೆ ಬಾ ಅಂತ ಕರೆದ್ರು.
