ಉದಯವಾಹಿನಿ, ಬೀದರ್: 99 ಲಕ್ಷ ರೂ. ಸಾಲ ಪಡೆದು ಹಿಂತಿರುಗಿಸದ ಆರೋಪದ ಮೇಲೆ ಶಾಸಕ ಶರಣು ಸಲಗರ್ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ. ಹೀಗಾಗಿ ಉದ್ಯಮಿಯಿಂದ ಹಣ ಪಡೆದು ಶರಣು ಸಲಗರ್ ಉಲ್ಟಾ ಹೊಡೆದ್ರಾ ಎಂಬ ಅನುಮಾನ ಮೂಡಿದೆ.ಉದ್ಯಮಿ ಸಂಜು ಸುಗುರೆ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಶರಣು ಸಲಗರ್ ನೀಡಿದ ಬೆನ್ನಲ್ಲೇ ಇದೀಗ ಆಡಿಯೋ ವೈರಲ್ ಆಗಿದೆ. ಸಾಲದ ಹಣ ವಾಪಸ್ ನೀಡದೇ ಇದ್ದಾಗ ಉದ್ಯಮಿ ಸಂಜು ಅವರ ಪತ್ನಿ ಹಾಗೂ ಮಗ ಸಲಗರ್ ಅವರ ಮನೆಗೆ ಹೋದಾಗ ನಡೆದ ಸಂಭಾಷಣೆ ಈ ಆಡಿಯೋ ಕೇಳಿಬಂದಿದೆ. ವೈರಲ್ ಆದ ಆಡಿಯೋದಲ್ಲಿ, ಶರಣು ಅವರು ಮಾತನಾಡುತ್ತಾ, ನೀವು ಈ ಬಗ್ಗೆ ಹೇಳುವ ಹಾಗಿಲ್ಲ, ಇದರಲ್ಲಿ ಮಧ್ಯೆ ಬರುವಂತಿಲ್ಲ.
ದುಡ್ಡು ಕೊಟ್ಟಿದ್ದು ಅವನು, ತೆಗೆದುಕೊಂಡವನು ನಾನು ಎನ್ನುತ್ತಾರೆ. ಆಗ ಸಂಜು ಅವರ ಪತ್ನಿ ಮಾತನಾಡಿ, ನೀವು ಫೋನ್ ರಿಸೀವ್ ಮಾಡುತ್ತಿಲ್ಲ, ಅದಕ್ಕೆ ನಾವು ಕೇಳಲು ಬಂದಿದ್ದೇವೆ. ಇಲ್ಲದಿದ್ದರೆ ನಾವು ಬರುತ್ತಿರಲಿಲ್ಲ. ನೀವು ಜಮೀನು ಬರೆದುಕೊಳ್ಳಿ ಎಂದಿದ್ರಿ, ಆದರೆ ನಾವು ನಿಮ್ಮ ಮೇಲಿನ ನಂಬಿಕೆ ಹಾಗೂ ಭರವಸೆಯಿಂದ ಬೇಡ ಎಂದಿದ್ದೆವು ಎನ್ನುತ್ತಾರೆ. ಅದಕ್ಕೆ ಶರಣು ಅವರು ನಾನು ಯಾವಾಗಲು ಫೋನ್ ರಿಸೀವ್ ಮಾಡ್ತೀನಿ, ನಿಮ್ಮ ಬಳಿ ಬೇರೆ ಸಾಕ್ಷಿಗಳಿದ್ದರೆ ತೆಗೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಇದೀಗ ಶರಣು ಸಲಗರ್ ಅವರು ಮಾತನಾಡಿದ್ದ ಆಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಈಗಾಗಲೇ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಉದ್ಯಮಿ ಸಂಜು ಸುಗುರೆ ದೂರು ನೀಡಿದ್ದು, 2023ರ ಚುನಾವಣೆ ಸಂದರ್ಭದಲ್ಲಿ ಶಾಸಕ ಸಲಗರ್ ಚುನಾವಣೆ ವೆಚ್ಚಕ್ಕೆಂದು 99 ಲಕ್ಷ ರೂ. ಸಾಲ ಪಡೆದಿದ್ದಾರೆಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!