ಉದಯವಾಹಿನಿ , ಭಾರತ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ. ಆದರೆ, ಅತೀ ಶ್ರೀಮಂತ ದೇಶಗಳನ್ನು ಒಂದು ಸಾಲಿಗೆ ಜೋಡಿಸಿದರೆ ಭಾರತವು ಶ್ರೀಲಂಕಾಗಿಂತಲೂ ಹಿಂದಕ್ಕೆ ಹೋಗುತ್ತದೆ. ಒಂದು ದೇಶ ಎಷ್ಟು ಶ್ರೀಮಂತಿಕೆ ಹೊಂದಿದೆ ಎಂಬುದನ್ನು ಅದರ ಆರ್ಥಿಕ ಗಾತ್ರ ಮಾತ್ರವಲ್ಲದೆ, ಜನರ ತಲಾದಾಯವನ್ನೂ ಪರಿಗಣಿಸಲಾಗುತ್ತದೆ. ಈ ಜಿಡಿಪಿ ತಲಾದಾಯದಲ್ಲಿ ಚೀನಾ ದೇಶವೇ 74ನೇ ಸ್ಥಾನದಲ್ಲಿರುವುದು ಅಚ್ಚರಿ ಎನಿಸಬಹುದು. ಮಾಲ್ಡೀವ್ಸ್​ನಂತಹ ದೇಶವೇ ಚೀನಾಗಿಂತ ಮೇಲಿದೆ ಎಂದರೆ ಅಚ್ಚರಿ ಎನಿಸಬಹುದು.
ಜಿಡಿಪಿ ಪಿಪಿಪಿ ತಲಾದಾಯದಲ್ಲಿ ಟಾಪ್-10 ದೇಶಗಳ ಪಟ್ಟಿ ಲೀಕ್ಟನ್​ಸ್ಟೇನ್: 2,01,112 ಡಾಲರ್
ಸಿಂಗಾಪುರ್: 1,56,969 ಡಾಲರ್ , ಲುಕ್ಸಂಬರ್ಗ್: 1,52,394 ಡಾಲರ್ , ಐರ್ಲೆಂಡ್: 1,47,878 ಡಾಲರ್
ಕತಾರ್: 1,22,283 ಡಾಲರ್, ನಾರ್ವೇ: 1,06,694 ಡಾಲರ್, ಸ್ವಿಟ್ಜರ್​ಲ್ಯಾಂಡ್: 97,659 ಡಾಲರ್
ಬ್ರೂನೇ ದಾರುಸ್ಸಲಂ: 94,472 ಡಾಲರ್ , ಗಯಾನ: 94,189 ಡಾಲರ್ ಅಮೆರಿಕ: 89,598 ಡಾಲರ್ ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕ ಹೊಂದಿದ್ದರೂ, ಲೀಕ್ಟನ್​ಸ್ಟೇನ್ ದೇಶದ ಜಿಡಿಪಿಗಿಂತ 500 ಪಟ್ಟು ಹೆಚ್ಚು ಜಿಡಿಪಿ ಹೊಂದಿದ್ದರೂ ಶ್ರೀಮಂತ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಸುಮಾರು 10 ಬಿಲಿಯನ್ ಡಾಲರ್​ನಷ್ಟೇ ಗಾತ್ರದ ಜಿಡಿಪಿ ಹೊಂದಿರುವ ಲೀಕ್ಟನ್​ಸ್ಟೇನ್ ಶ್ರೀಮಂತಿಕೆಯಲ್ಲಿ ನಂಬರ್ ಒನ್ ಎನಿಸಿದೆ.

Leave a Reply

Your email address will not be published. Required fields are marked *

error: Content is protected !!