ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷವೂ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ. ಮಧ್ಯರಾತ್ರಿವರೆಗೂ ಸಂಭ್ರಮಿಸುವ ಬೆಂಗಳೂರಿಗರ ಸುರಕ್ಷತೆ ಸಂಚಾರಕ್ಕಾಗಿ ಮೆಟ್ರೋ , ಬಿಎಂಟಿಸಿ ತನ್ನ ಸೇವೆ ಸಮಯ ಮತ್ತು ಮಾರ್ಗಗಳನ್ನ ವಿಸ್ತರಿಸಿದ್ದು, ತಡರಾತ್ರಿವರೆಗೂ ಜನರ ಅನೂಕೂಲಕ್ಕಾಗಿ ಸಂಚಾರ ನಾಡಿಗಳು ಸೇವೆ ನೀಡಲಿವೆ.
ಹೊಸ ವರ್ಷದ ಹಿನ್ನೆಲೆ ಇಂದು ರಾತ್ರಿ ಹಾಗೂ ಜನವರಿ 1ರಂದು ಮೆಟ್ರೋ ವಿಶೇಷ ವೇಳಾಪಟ್ಟಿ ಜಾರಿಯಲ್ಲಿರಲಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನ ತಡರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಕೊನೆಯ ರೈಲು ಸಮಯವನ್ನು ವಿಸ್ತರಿಸಲಾಗಿದೆ.
ಎಲ್ಲಿವರೆಗೆ ಸಮಯ ವಿಸ್ತರಣೆ? ಎಲ್ಲೆಲ್ಲಿಗೆ?
ನೇರಳೆ ಮಾರ್ಗ:
ಬೈಯಪ್ಪನಹಳ್ಳಿ-ಕೆಂಗೇರಿ ಮಾರ್ಗ: 1:45ರವರೆಗೆ
ಕೆಂಗೇರಿ- ಬೈಯಪ್ಪನಹಳ್ಳಿ ಮಾರ್ಗ: ರಾತ್ರಿ 2ರವರೆಗೆ
ಹಸಿರು ಮಾರ್ಗ:
ಮೆಜೆಸ್ಟಿಕ್ – ಮಾದಾವರ: ರಾತ್ರಿ 2ರವರೆಗೆ
ಮಾದಾವರ – ಮೆಜೆಸ್ಟಿಕ್: ರಾತ್ರಿ 2ರವರೆಗೆ
ಹಳದಿ ಮಾರ್ಗ:
ಆರ್‌ವಿ ರಸ್ತೆ – ಬೊಮ್ಮಸಂದ್ರ ಮಾರ್ಗ: ರಾತ್ರಿ 3:10ರವರೆಗೆ
ಬೊಮ್ಮಸಂದ್ರ – ಆರ್‌ವಿ ರಸ್ತೆ: 1:30ರವರೆಗೆ
ಮೆಜೆಸ್ಟಿಕ್ ಕೇಂದ್ರದಲ್ಲಿ ಎಲ್ಲಾ ಮಾರ್ಗಗಳ ಕೊನೆಯ ರೈಲು ರಾತ್ರಿ 2:45ಕ್ಕೆ ಇರಲಿದೆ.
