ಉದಯವಾಹಿನಿ, ಪಟನಾ: ಬಿಹಾರದ ಪ್ರಸಿದ್ಧ ಪ್ರವಾಸಿ ತಾಣವಾದ ರಾಜ್‌ಗೀರ್‌ನಲ್ಲಿ ಪೊಲೀಸರು ಸೆಕ್ಸ್ ರಾಕೆಟ್ ಅನ್ನು ಭೇದಿಸಿದ್ದಾರೆ. ಸ್ಥಳೀಯ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು , ಮೂವರು ಯುವಕರನ್ನು ಬಂಧಿಸಿದ್ದಾರೆ. ಹಾಗೆಯೇ 15 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಶನಿವಾರ ಸಂಜೆ ಧುರ್ವಾ ಮಾಡ್‌ನಲ್ಲಿರುವ ರೆಸಿಡೆನ್ಸಿ ಹೋಟೆಲ್‌ನಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಯರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ. ನೃತ್ಯ ಮತ್ತು ಸಂಗೀತ ಪ್ರದರ್ಶನಗಳ ನೆಪದಲ್ಲಿ ಕರೆದು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿತ್ತು ಎಂದು ಯುವತಿಯರು ಆರೋಪಿಸಿದ್ದಾರೆ. ನವಾಡಾ ಜಿಲ್ಲೆಯ ರೆಪುರ ಗ್ರಾಮದ ಗೌರವ್ ಕುಮಾರ್, ಹಿಸುವಾದ ಸೋನ್ಸಾ ಗ್ರಾಮದ ಸುಮನ್ ಕುಮಾರ್ ಮತ್ತು ಇಸ್ಲಾಂಪುರದ ಅಕ್ಬರ್‌ಪುರ ಗ್ರಾಮದ ಮನೋರಂಜನ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ಸಿಂಗ್ ದೃಢಪಡಿಸಿದ್ದಾರೆ. ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಲಾಲ್ಮುನಿ ದುಬೆ, ಸ್ಟೇಷನ್ ಹೌಸ್ ಆಫೀಸರ್ ರಮಣ್ ಕುಮಾರ್, ನೇಹಾ ಕುಮಾರಿ ಮತ್ತು ರಾಮನಾಥ್ ಚೌಹಾಣ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ದಾಳಿಯ ಉದ್ದೇಶ ಅಪರಾಧಿಗಳನ್ನು ಬಂಧಿಸುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಇದೇ ರೀತಿಯ ಶೋಷಣೆಯನ್ನು ತಡೆಯುವುದಾಗಿದೆ ಎಂದು ಸಿಂಗ್ ಹೇಳಿದರು. ಇಂತಹ ಅಪರಾಧ ಜಾಲಗಳಿಂದ ಯುವತಿಯರು ಮತ್ತು ಮಕ್ಕಳನ್ನು ರಕ್ಷಿಸಲು ಸಾಮಾಜಿಕ ಜಾಗೃತಿಯ ಮಹತ್ವವನ್ನು ಅಧಿಕಾರಿಗಳು ಒತ್ತಿ ಹೇಳಿದರು. ಇನ್ನು ಈ ಸಂಬಂಧ, ಸ್ಥಳೀಯ ಆಡಳಿತವು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಪ್ರಮುಖ ಪ್ರವಾಸಿ ತಾಣವಾದ ರಾಜಗೀರ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸುರಕ್ಷಿತವನ್ನಾಗಿ ಮಾಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಪುನರುಚ್ಛರಿಸಿದೆ.
