ಉದಯವಾಹಿನಿ, ಆಕ್ಲೆಂಡ್: ವಿಶ್ವದೆಲ್ಲೆಡೆ ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಇದೆಲ್ಲದರ ಮಧ್ಯೆ ನ್ಯೂಜಿಲೆಂಡ್‌ನ 2026ನ್ನು ಸ್ವಾಗತಿಸಿದೆ.ಆಕ್ಲೆಂಡ್‌ನ ಸ್ಕೈ ಟವರ್‌ನಲ್ಲಿ ಅದ್ಭುತ ಪಟಾಕಿ ಪ್ರದರ್ಶನದ ಮೂಲಕ ಹೊಸ ವರ್ಷ 2026ನ್ನು ಸ್ವಾಗತಿಸಿತು. ಐದು ನಿಮಿಷಗಳ ಕಾಲ ಸುಮಾರು 3,500 ಪಟಾಕಿಗಳನ್ನು ಸಿಡಿಸುವುದರ ಮೂಲಕ ರೋಮಾಂಚನಕಾರಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕಿರಿಬಾಟಿ ಬಳಿಕ ಹೊಸ ವರ್ಷವನ್ನು ಸ್ವಾಗತಿಸುವ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆ ಆಕ್ಲೆಂಡ್‌ಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 4:30ಕ್ಕೆ ಆಕ್ಲೆಂಡ್ 2026ನ್ನು ಬರಮಾಡಿಕೊಂಡಿತು. ಭಾರತದ ಕಾಲಮಾನಕ್ಕಿಂತ ಸುಮಾರು 7 ಗಂಟೆ 30 ನಿಮಿಷದ ಮೊದಲು ಆಕ್ಲೆಂಡ್ ಹೊಸವರ್ಷ ಆರಂಭವಾಗುತ್ತದೆ. ನ್ಯೂಜಿಲೆಂಡ್ ಹೊಸ ವರ್ಷವನ್ನು ಸ್ವಾಗತಿಸಿದ ಎರಡು ಗಂಟೆಗಳ ನಂತರ ಆಸ್ಟ್ರೇಲಿಯಾದ ಪೂರ್ವ ಕರಾವಳಿ 2026 ಅನ್ನು ಸ್ವಾಗತಿಸುತ್ತದೆ
