ಉದಯವಾಹಿನಿ, ತರಾವಾ: ಭಾರತದಲ್ಲಿ ಹೊಸ ವರ್ಷಾಚರಣೆಗೆ ಕೌಂಟ್‌ಡೌನ್ ಆರಂಭವಾಗಿರುವಾಗ ಪೆಸಿಫಿಕ್‌ನಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರ ಕಿರಿಬಾಟಿ ಹೊಸ ವರ್ಷವನ್ನು ಸ್ವಾಗತಿಸಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಕಿರುಬಾಟಿ 2026ಕ್ಕೆ ಅಧಿಕೃತವಾಗಿ ಕಾಲಿಟ್ಟಿತು. ಭಾರತದ ಕಾಲಮಾನಕ್ಕಿಂತ ಸುಮಾರು 8 ಗಂಟೆ 30 ನಿಮಿಷದ ಮೊದಲು ಕಿರಿಬಾಟಿಯಲ್ಲಿ ಹೊಸವರ್ಷ ಆರಂಭವಾಗುತ್ತದೆ.
ಕಿರಿಬಾಟಿ ಗ್ರೀನ್‌ವಿಚ್ ಸಮಯಕ್ಕಿಂತ 14 ಗಂಟೆಗಳ ಮುಂದೆ ಮತ್ತು ಪ್ರಪಂಚದ ಅನೇಕ ಭಾಗಗಳಿಗಿಂತ ಒಂದು ದಿನ ಮುಂದಿದೆ. ಈ ಪುಟ್ಟ ದ್ವೀಪ ರಾಷ್ಟದಲ್ಲಿ 1.20 ಲಕ್ಷ ಜನಸಂಖ್ಯೆ ಇದೆ. ಭೂಮಿಯ ಮೇಲಿನ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
ಮಧ್ಯ ಪೆಸಿಫಿಕ್‌ನಲ್ಲಿರುವ ಜನವಸತಿಯಿಲ್ಲದ ಅಮೆರಿಕದ ಅಕರ್ ಮತ್ತು ಹೌಲ್ಯಾಂಡ್ ದ್ವೀಪಗಳು ಹೊಸ ವರ್ಷವನ್ನು ಆಚರಿಸುವ ಕೊನೆಯ ಸ್ಥಳಗಳಾಗಿವೆ. ಕಿರಿಬಾಟಿಯಲ್ಲಿ ಹೊಸ ವರ್ಷ ಆಚರಿಸಿದ 26 ಗಂಟೆಯ ನಂತರ ಇಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.
