ಉದಯವಾಹಿನಿ,: ಹೆಚ್. ಎಸ್. ನಾಗಶ್ರೀ ಅವರು ನಿರ್ಮಿಸಿರುವ ನೂತನ ಚಿತ್ರ ಪ್ಯಾರ್. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಾಯಕಿಯ ತಂದೆಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಿಶ್ವಿನ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ. ಆ್ಯನ್ ಎಮೋಷನಲ್ ಜರ್ನಿ ಆಫ್ ಲವ್ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಈಗಾಗಲೇ ರಿಲೀಸಾಗಿ, ಸಂಗೀತ ಪ್ರಿಯರ ಮನ ಗೆದ್ದಿರುವ ‘ಒಂದೇ ಮಾತಲಿ ಹೇಳೋದಾದರೆ ‘ ಎಂಬ ಹಾಡಿನ ಸುಂದರ ವೀಡಿಯೋ ಇನ್ ಸ್ಟಾಗ್ರಾಂನಲ್ಲಿ 100 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೆ ಮಿಲಿಯನ್ ಪ್ಲಸ್ ವ್ಯೂಸ್ ಆಗಿದೆ. ಪಳನಿ ಡಿ.ಸೇನಾಪತಿ ಅವರ ಸಂಗೀತ, ಕೆಎಸ್.ಚಂದ್ರಶೇಖರ್ ಅವರ ಕ್ಯಾಮೆರಾದಲ್ಲಿ ಲಡಾಕ್ ನ ರಮಣೀಯ ಪರಿಸರದಲ್ಲಿ ಈ ಹಾಡನ್ನು ಸೆರೆ ಹಿಡಿಯಲಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಹಾಡಿನ ಯಶಸ್ಸಿನ ಖುಷಿಯನ್ನು ಪ್ಯಾರ್ ಚಿತ್ರತಂಡ ಮಾಧ್ಯದೊಂದಿಗೆ ಹಂಚಿಕೊಂಡಿತು.ಮೊದಲಿಗೆ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಡಾ.ಬಿಎಸ್.ನಾಗರಾಜು ಮಾತನಾಡುತ್ತಾ ಲಡಾಕ್, ಕಾಶ್ಮೀರ, ಜೈಸಲ್ಮೇರ್ ನಲ್ಲಿ ಶೂಟ್ ಮಾಡಲಾಗಿರುವ ಈ ಹಾಡು ಅಧ್ಭುತವಾಗಿ ಮೂಡಿಬಂದಿದೆ ಎಂದರು. ನಿರ್ದೇಶಕ ಸುಪ್ರೀತ್ ಮಾತನಾಡುತ್ತ ನಮ್ಮ ಚಿತ್ರದಲ್ಲಿ ರವಿಸರ್ ಅಭಿನಯಿಸಲು ಒಪ್ಪಿದಾಗ ಈ ಟೈಟಲ್ ಇಟ್ಟಿದ್ದಕ್ಕೂ ಸಾರ್ಥಕ ಎನಿಸಿತು. ಪ್ರೀತಿ ಪ್ರೇಮದ ಕಥೆಯ ಜತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನೂ ತೆರೆದಿಡುವಂಥ ವಿಭಿನ್ನ ಕಾನ್ಸೆಪ್ಟ್ ನಮ್ಮ ಚಿತ್ರದಲ್ಲಿದೆ. ಕಥೆ ಮಾಡಿಕೊಂಡ ಮೇಲೆ ಮುಖ್ಯವಾಗಿ ಗಮನ ಹರಿಸಿದ್ದೇ ಹಾಡುಗಳ ಮೇಲೆ. 7 ವರ್ಷಗಳ ನಂತರ ಈ ಹಾಡನ್ನು ಸೋನು ನಿಗಂ, ಶ್ರೇಯಾ ಘೋಷಾಲ್ ಅದ್ಭುತವಾಗಿ ಹಾಡಿದ್ದಾರೆ.
