ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ಮತ್ತೆ ಕಿತ್ತಾಟಕ್ಕೆ ಇಳಿದಿದ್ದಾರೆ. ಮನೆ ಕ್ಯಾಪ್ಟನ್ ಆಗಿರುವ ಗಿಲ್ಲಿ, ಅಶ್ವಿನಿ ಅವರನ್ನು ನಾಮಿನೇಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಇಬ್ಬರ ನಡುವೆಯೂ ಜಗಳ ಆಗ್ತಿದೆ. ಅಶ್ವಿನಿ ಗೌಡ ಮತ್ತು ಧ್ರುವಂತ್ ಇಬ್ಬರನ್ನೂ ಗಿಲ್ಲಿ ಟ್ರಿಗರ್ ಮಾಡ್ತಿದ್ದಾರೆ. ಇಬ್ಬರೂ ನನ್ನ ಕೈಗೊಂಬೆಗಳು ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಅಶ್ವಿನಿ, ಧ್ರುವಂತ್ ಕೆರಳಿ ಕೆಂಡವಾಗಿದ್ದಾರೆ. ಗಿಲ್ಲಿಗೆ ಸವಾಲ್ ಕೂಡ ಹಾಕಿದ್ದಾರೆ. ‘ಇನ್ಮುಂದೆ ಆಟ ಇರೋದು.. ಚಾಲೆಂಜ್ ಕಣೊ..’ ಅಂತ ಅಶ್ವಿನಿ ಗುಡುಗಿ ಗಿಲ್ಲಿಗೆ ತೊಡೆ ತಟ್ಟಿ ಸವಾಲ್ ಕೂಡ ಹಾಕಿದ್ದಾರೆ. ಆದರೆ, ಇದ್ಯಾವುದಕ್ಕೂ ಡೋಂಟ್ ಕೇರ್ ಎನ್ನದೇ ಗಿಲ್ಲಿ ಮತ್ತೆ ಮತ್ತೆ ಟ್ರಿಗರ್ ಮಾಡ್ತಿದ್ದಾರೆ.
ಗಿಲ್ಲಿ ಕ್ಯಾಪ್ಟನ್ ಆದ ಬಳಿಕ ತನ್ನ ವರಸೆಯನ್ನೇ ಬದಲಾಯಿಸಿದ್ದಾರೆ. ಮನೆ ಕೆಲಸದ ವಿಚಾರಕ್ಕೆ ಅಶ್ವಿನಿ ಗೌಡ ಜೊತೆ ಜಗಳ ಮಾಡಿಕೊಂಡರು. ಅಶ್ವಿನಿ ವೀಕ್ ಕಂಟೆಸ್ಟೆಂಟ್ ಅಂತ ಛೇಡಿಸಿದರು. ನಂತರ ಪ್ರತಿಸ್ಪರ್ಧಿಗಳನ್ನು ಪರಸ್ಪರರು ನಾಮಿನೇಟ್ ಮಾಡುವ ಪ್ರಕ್ರಿಯೆಯಿಂದಲೂ ಅಶ್ವಿನಿ ಅವರನ್ನು ಗಿಲ್ಲಿ ಹೊರಗಿಟ್ಟರು. ನಂತರ ಅಶ್ವಿನಿ, ರಾಷಿಕಾ, ಧ್ರುವಂತ್, ಧನುಷ್, ಸ್ಪಂದನಾ ನಾಮಿನೇಟ್ ಆಗುವಂತೆ ಗಿಲ್ಲಿ ನೋಡಿಕೊಂಡರು. ಇದೆಲ್ಲ ವಿಚಾರಕ್ಕೆ ಗಿಲ್ಲಿ ಮೇಲೆ ಅಶ್ವಿನಿಗೆ ಸಿಟ್ಟು ಜಾಸ್ತಿಯಾಗಿದೆ.
