ಉದಯವಾಹಿನಿ, ಬೆಂಗಳೂರು: ಜಮೀರ್‌ಗೆ ದೇಶ, ರಾಜ್ಯ ಬೇಡ, ತಮ್ಮ ಜನಸಂಖ್ಯೆ, ಮತದಾರರು ಹೆಚ್ಚಾಗಬೇಕು ಅಂತ ಮನೆ ಕೊಡ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಕೋಗಿಲು ಲೇಔಟ್ ಅಕ್ರಮ ನಿವಾಸಗಳಿಗೆ ಸರ್ಕಾರದಿಂದ ಮನೆ ಕೊಡ್ತಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅವರೆಲ್ಲಾ ಮುಸ್ಲಿಂ ಇದ್ದಾರೆ ಅಂತ ಜಮೀರ್ ಮಾತಾಡ್ತಾ ಇದ್ದಾರೆ. ಜಮೀರ್‌ಗೆ ದೇಶ, ರಾಜ್ಯ ಬೇಕಾಗಿಲ್ಲ. ತಮ್ಮ ಜನಸಂಖ್ಯೆ, ತಮ್ಮ ಮತದಾರರು ಹೆಚ್ಚಾಗಬೇಕು. ಈ ದೇಶವನ್ನು ಆದಷ್ಟು ಬೇಗ ಇಸ್ಲಾಂಮೀಕರಣ ಮಾಡಬೇಕು ಅಂತ ಟಾರ್ಗೆಟ್ ಬಿಟ್ಟರೆ, ಅವರ ತಲೆಯಲ್ಲಿ ಏನು ಇರಲ್ಲ. ದುರ್ದೈವ ಅಂದರೆ ಸಿದ್ದರಾಮಯ್ಯ ಅಂತಹವರು ಜಾತ್ಯಾತೀತ ಅನ್ನೋ ಹೆಸರಿನಿಂದ ಮುಸ್ಲಿಂ ತುಷ್ಟೀಕರಣ ಮಾಡೋದು ಬಿಟ್ಟು ಬೇರೆ ಜನರ ಸಮಸ್ಯೆ ಗೊತ್ತಿಲ್ಲ. ಹೀಗಾಗಿ ಇಂತಹ ನಿರ್ಣಯ ಆಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ಮುಟ್ಟಿದೆ. ಸಿದ್ದರಾಮಯ್ಯ ನಿಜವಾದ ಕನ್ನಡಿಗರು, ಮೂಲ ನಿವಾಸಿಗಳಿಗೆ ವಸತಿ ಕೊಡೋದು ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂಗೆ ವಾರ್ನಿಂಗ್ ಮಾಡಿದ್ದರಿಂದ ಲೋಕಲ್ ಅಲ್ಲದೆ ಇರುವವರಿಗೆ ಮನೆ ಕೊಡ್ತಾ ಇದ್ದಾರೆ. ಅವರೆಲ್ಲಾ ಯಾವ ದೇಶದವರು ಅಂತ ತನಿಖೆ ಮಾಡದೇ ವೋಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ಕೊಡುವ ನಿರ್ಧಾರ ಮಾಡ್ತಿದೆ. ಇದನ್ನ ನಾವು ವಿರೋಧ ಮಾಡ್ತೀವಿ. ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಇದ್ದಾರೆ ಅವರನ್ನ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
