ಉದಯವಾಹಿನಿ, ದಾವಣಗೆರೆ: ನಗರದ ಗುರುಕುಲ ಶಾಲೆಯ ವಿದ್ಯಾರ್ಥಿಗಳು 100 ಜನ ನಿರಾಶ್ರಿತರಿಗೆ ಉಚಿತವಾಗಿ ಬ್ಲಾಂಕೆಟ್ ವಿತರಣೆ ಮಾಡಿ ವಿನೂತನವಾಗಿ ಹೊಸ ವರ್ಷ ಆಚರಣೆ ಮಾಡಿದ್ದಾರೆ. ನಿರಾಶ್ರಿತರಿಗೆ ಬ್ಲಾಂಕೆಟ್, ಸ್ವೆಟರ್ ಮತ್ತು ಸಿಹಿ ವಿತರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಈ ವೇಳೆ ನಿಮಗೆ ಏನೇ ಸಹಾಯ ಬೇಕಿದ್ದಲ್ಲಿ ನಮ್ಮ ಗುರುಕುಲ ಸೇವಾ ಫೌಂಡೇಶನ್ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ನಿರಾಶ್ರಿತರಿಗೆ ಮಕ್ಕಳು ಧ್ಯರ್ಯ ತುಂಬಿದ್ದಾರೆ. ಮಕ್ಕಳಿಗೆ ಮಾನವೀಯತೆಯ ಸಂದೇಶದ ಜೊತೆಗೆ ಸಮಾಜದಲ್ಲಿ ಭಾವೈಕ್ಯತೆ ಮತ್ತು ಸಹಾಯದ ಪ್ರೇರಣೆ ಬೆಳೆಸಲು ಸಂಸ್ಥೆಯಿಂದ ಈ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳ ವಿನೂತನ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
