ಉದಯವಾಹಿನಿ, ಭುವನೇಶ್ವರ್‌: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಬುಧವಾರ ಒಡಿಶಾ ಕರಾವಳಿಯಲ್ಲಿ ಎರಡು ʻಪ್ರಳಯʼ ಕ್ಷಿಪಣಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಭೂಮಿಯಿಂದ ಭೂಮಿಗೆ ಉಡಾಯಿಸುವ ಕ್ಷಿಪಣಿಯಾಗಿದೆ.ಬೆಳಗ್ಗೆ 10:30ರ ಸುಮಾರಿಗೆ ಎರಡೂ ಕ್ಷಿಪಣಿಗಳನ್ನ ಒಂದೇ ಲಾಂಚರ್‌ನಿಂದ ಉಡಾಯಿಸಲಾಯಿತು. ಅವುಗಳ ಉದ್ದೇಶಿತ ಹಾರಾಟದ ಪಥ ಅನುಸರಿಸಿದವು. ಜೊತೆಗೆ ನಿಗದಿತ ಗುರಿ ತಲುಪುವಲ್ಲಿ ಯಶಸ್ವಿಯಾದವು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ಈ ʻಪ್ರಳಯʼ ಕ್ಷಿಪಣಿಯು ಹೆಚ್ಚು ನಿಖರತೆ ಹಾಗೂ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ. ಬಹು ಉದ್ದೇಶಿತ ಗುರಿಗಳನ್ನು ಪೂರೈಸುವ ಸಾಮರ್ಥ್ಯ ಇದಕ್ಕಿದೆ.
ಈ ಕ್ಷಿಪಣಿಗಳು 500 ಕೆಜಿಯಿಂದ 1,000 ಕೆಜಿ ಭಾರದ ಸಿಡಿತಲೆಗಳನ್ನ ಹೊತ್ತು 150 ರಿಂದ 500 ಕಿಮೀ ದೂರ ಸಾಗಿ, ಗುಗುರಿ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!