ಉದಯವಾಹಿನಿ, ಭೋಪಾಲ್ : 26 ವರ್ಷದ ಮುಸ್ಲಿಂ ಎಂಜಿನಿಯರ್ ಒಬ್ಬರಿಗೆ ದೇವಸ್ಥಾನಕ್ಕೆ ಪ್ರವೇಶವನ್ನು ಪದೇ ಪದೆ ನಿರಾಕರಿಸಿದ್ದರಿಂದ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಅಚ್ಚರಿಯ ಘಟನೆ ನಡೆದಿದೆ. ಮಧ್ಯ ಪ್ರದೇಶದ ಸಾಗರ್ ಮೂಲದ ವ್ಯಕ್ತಿ ಮತಾಂತರಗೊಂಡವರು. ಆ ವ್ಯಕ್ತಿ ಉತ್ತರ ಪ್ರದೇಶದ ಕಾಶಿಯಲ್ಲಿ ನಡೆದ ಸಾಂಪ್ರದಾಯಿಕ ವೈದಿಕ ಸಮಾರಂಭದ ಮೂಲಕ ಅಧಿಕೃತವಾಗಿ ಹಿಂದೂ ಧರ್ಮ ಸ್ವೀಕರಿಸಿದರು.
ಅಸದ್ ಖಾನ್ ಎಂಬ ಹೆಸರಿದ್ದ ಯುವಕ ಇದೀಗ ಅಥರ್ವ ತ್ಯಾಗಿ ಎಂದು ಹೊಸ ಹೆಸರಿನಿಂದ ಗುರುತಿಸಲ್ಪಡಲಿದ್ದಾರೆ. ಕಾಶಿಯ ಗಂಗಾ ನದಿಯಲ್ಲಿ ದೋಣಿಯಲ್ಲಿ 21 ಬ್ರಾಹ್ಮಣರು ಶುದ್ಧೀಕರಣ ವಿಧಿಗಳನ್ನು ನಡೆಸಿದ ನಂತರ ಸನಾತನ ಧರ್ಮಕ್ಕೆ ಮರಳಿದರು. ಈ ಸಮಾರಂಭದಲ್ಲಿ ಪಂಚಗವ್ಯ ಸ್ನಾನ, ಕೂದಲು ಬೋಳಿಸುವುದು, ತಿಲಕ ಹಚ್ಚುವುದು, ಗಣೇಶ ಪೂಜೆ, ಹನುಮಾನ್ ಚಾಲೀಸಾ ಪಠಣ ಮತ್ತು ಹವನವನ್ನು ನಡೆಸಲಾಯಿತು.
