ಉದಯವಾಹಿನಿ, ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ರಶ್ಮಿಕಾ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಹೊಸ ಪ್ರತಿಭೆಯಾಗಿ ಕಾಲಿಟ್ಟ ರಶ್ಮಿಕಾರನ್ನ ರಾತ್ರೋರಾತ್ರಿ ಸ್ಟಾರ್ ಮಾಡಿರುವ ಚಿತ್ರ. ಇದೀಗ ಕಿರಿಕ್ ಪಾರ್ಟಿ ಜೊತೆ ಜೊತೆಯಾಗಿ ರಶ್ಮಿಕಾ ತಮ್ಮ ಸಿನಿ ಬದುಕಿಗೆ 9 ವರ್ಷಗಳನ್ನ ಪೂರೈಸಿದ ಖುಷಿಯಲ್ಲಿದ್ದಾರೆ. ರಶ್ಮಿಕಾ ಸಿನಿ ಪ್ರಯಾಣದ ಬಗ್ಗೆ ಸಂತಸದಲ್ಲಿದ್ದರೆ ಕನ್ನಡ ಅಭಿಮಾನಿಗಳು ಗರಂ ಆಗಿದ್ದಾರೆ.
ರಶ್ಮಿಕಾ ಸಿನಿ ಪಯಣ ನೆನೆದು ಸುದೀರ್ಘ ಪತ್ರ ಬರೆದು ಇನ್‌ಸ್ಟಾದಲ್ಲಿ ಪೋಸ್ಟ್ ಪ್ರಕಟಿಸಿ ಕೃತಜ್ಞತೆ ಸಲ್ಲಿಸಿದ್ದರು. ಆದರೆ ಕೃತಜ್ಞರಾಗಬೇಕಾದಲ್ಲಿ ಕೃತಜ್ಞರಾಗಿಲ್ಲ. ತಮ್ಮ ಪತ್ರದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಹೆಸರನ್ನಾಗಲಿ, ಅವಕಾಶ ಕೊಟ್ಟ ರಕ್ಷಿತ್ ಶೆಟ್ಟಿ , ರಿಷಬ್ ಶೆಟ್ಟಿ ಹೆಸರನ್ನಾಗಲಿ ಹೇಳಲೇ ಇಲ್ಲ. ದಡ ಸೇರಿಸಿದ ಅಂಬಿಗನನ್ನೇ ಮರೆತಂತೆ ಮೊದಲ ಚಿತ್ರದ ಹೆಸರನ್ನೂ ಹೇಳಿಲ್ಲ, ಅವಕಾಶ ಕೊಟ್ಟವರನ್ನೂ ನೆನೆದಿಲ್ಲ. ರಶ್ಮಿಕಾರ ಈ ವರಸೆ ಹೊಸದಲ್ಲ. ಆದರೆ ಹತ್ತಿದ ಏಣಿಯನ್ನು ಈ ಸಂದರ್ಭದಲ್ಲಾದರೂ ನೆನೆಯಬಹುದಿತ್ತು. ಆದರೆ ನಿರ್ಲಕ್ಷಿಸಿ ಮತ್ತೆ ಕನ್ನಡ ಸಿನಿ ರಸಿಕರ ಕೋಪಕ್ಕೆ ತುತ್ತಾಗಿದ್ದಾರೆ.
