ಉದಯವಾಹಿನಿ, ರಂಗಸ್ಥಳಂ ಸಿನಿಮಾ ಮೂಲಕ ಸೂಪರ್ ಹಿಟ್ ಕಾಂಬಿನೇಷನ್ ಎಂದು ಕರೆಸಿಕೊಳ್ಳುವ ಜೋಡಿ ನಿರ್ದೇಶಕ ಸುಕುಮಾರ್ ಹಾಗೂ ನಟ ರಾಮ್‍ಚರಣ್ ಅವರದ್ದು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ರಂಗಸ್ಥಳಂ ಬಳಿಕ ಆರ್‌ಆರ್‌ಆರ್ ಚಿತ್ರದಲ್ಲಿ ರಾಮ್ ಬ್ಯುಸಿಯಾದ್ರೆ ಪುಷ್ಪ ಸರಣಿ ಚಿತ್ರ ಮಾಡೋದ್ರಲ್ಲಿ ಸುಕುಮಾರ್ ಬ್ಯುಸಿಯಾದ್ರು. ಇದೀಗ ಈ ಕಲ್ಟ್ ಸ್ಟೈಲ್ ಚಿತ್ರಗಳ ಡೈರೆಕ್ಟರ್ ರಾಮ್‍ಚರಣ್‍ಗೆ ಇನ್ನೊಂದು ಸಿನಿಮಾ ಮಾಡುವ ಸುದ್ದಿ ಹೊರಬಿದ್ದಿದೆ.
ಅದುವೇ ರಾಮ್ ಮುಂದಿನ ಚಿತ್ರ ಹಾಗೂ ಸುಕುಮಾರ್ ಮುಂದಿನ ಚಿತ್ರ ಅನ್ನೋದೇ ವಿಶೇಷ. ಅಂದಹಾಗೆ ಪುಷ್ಪ 3ಗೂ ಮುನ್ನ ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಅಲ್ಲಿಗೆ `ಪುಷ್ಪ 3′ ಸದ್ಯಕ್ಕಿಲ್ಲ ಅನ್ನೋದು ಫಿಕ್ಸ್. ಇನ್ನು ಅಲ್ಲು ಅರ್ಜನ್ ಕೂಡ ಅಟ್ಲಿ ಸಿನಿಮಾದ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದಾರೆ.
ಇದೀಗ ಶೀಘ್ರದಲ್ಲೇ ರಾಮ್‍ಚರಣ್ ನಟನೆಯ `ಪೆದ್ದಿ’ ಸಿನಿಮಾ ರಿಲೀಸ್ ಆಗಲಿದೆ. ಬಳಿಕ ಸುಕುಮಾರ್ ಹಾಗೂ ರಾಮ್‍ಚರಣ್ ಪ್ರಾಜೆಕ್ಟ್ ಜುಲೈನಿಂದ ಪ್ರಾರಂಭವಾಗಲಿದೆ ಅನ್ನೋದು ಪ್ರಾಥಮಿಕ ಮಾಹಿತಿ. ಅಲ್ಲಿಗೆ ಸೂಪರ್ ಹಿಟ್ ಕಾಂಬಿನೇಷನ್ ನಟ ನಿರ್ದೇಶಕರ ಜೋಡಿಯಿಂದ ಇನ್ನೊಂದು ಚಿತ್ರ ಬರುತ್ತಿದೆ ಅನ್ನೋದೇ ವಿಶೇಷ.

Leave a Reply

Your email address will not be published. Required fields are marked *

error: Content is protected !!