ಉದಯವಾಹಿನಿ, ಹಿಮಾಚಲ ಪ್ರದೇಶ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳ ಬಳಿಕ ಇದೀಗ ಹಿಮಾಚಲ ಪ್ರದೇಶದ ಗ್ರಾಮವೊಂದು ಮೊದಲ ಬಾರಿಗೆ ಬಸ್ ಸಂಪರ್ಕವನ್ನು ಪಡೆದುಕೊಂಡಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕರ್ಸೋಗ್ ಉಪವಿಭಾಗದಲ್ಲಿರುವ ತುಮ್ಮನ್ ಗ್ರಾಮಕ್ಕೆ ಡಿಸೆಂಬರ್ 31ರಂದು ಮೊದಲ ಬಾರಿಗೆ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಬಂದಿದ್ದು, ಇದು ಸ್ಥಳೀಯರಲ್ಲಿ ಸಂಭ್ರಮವನ್ನು ಹಚ್ಚಿಸಿದೆ. ಗ್ರಾಮಸ್ಥರು ಇದನ್ನು ಹಬ್ಬದಂತೆ ಆಚರಿಸಿದರು.
ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ತುಮ್ಮನ್ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕಿದ 78 ವರ್ಷಗಳ ಬಳಿಕ ಮೊದಲ ಬಾರಿಗೆ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಬಂದಿದೆ. ಇದನ್ನು ಸ್ಥಳೀಯರು ಅತ್ಯಂತ ಸಂತೋಷದಿಂದ ಆಚರಿಸಿದರು. ಡಿಸೆಂಬರ್ 31ರಂದು ಬಸ್ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಸಂತೋಷದಿಂದ ಬಸ್ ಅನ್ನು ಸ್ವಾಗತಿಸಿದರು. ಈ ಐತಿಹಾಸಿಕ ಘಟನೆಗೆ ನೂರಾರು ಗ್ರಾಮಸ್ಥರು ಸಾಕ್ಷಿಯಾದರು. ನಗರ ಪ್ರದೇಶಕ್ಕೆ ತುಮ್ಮನ್ ಅನ್ನು ಸಂಪರ್ಕಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಗ್ರಾಮಕ್ಕೆ ಬಸ್ ಆಗಮಿಸಿದ್ದನ್ನು ಸ್ಥಳೀಯರು ಹಬ್ಬದಂತೆ ಆಚರಿಸಿದರು. ರಿಬ್ಬನ್ ಕತ್ತರಿಸಿ ಬಸ್ ಸೇವೆಯನ್ನು ಉದ್ಘಾಟಿಸಲಾಯಿತು. ಬಸ್ ಅನ್ನು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಅಭಿವೃದ್ಧಿಯತ್ತ ಗ್ರಾಮದ ಪ್ರಮುಖ ಹೆಜ್ಜೆಗೆ ನೂರಾರು ಮಕ್ಕಳು, ಹಿರಿಯರು ಸಾಕ್ಷಿಯಾದರು.
