ಉದಯವಾಹಿನಿ, ನವದೆಹಲಿ: ಲೋಕಸಭಾ ಚುನಾವಣೆ 2024ರ ಕುರಿತ ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದು ಇವಿಎಂಗಳ ಮೇಲೆ ಸಾರ್ವಜನಿಕರಲ್ಲಿ ಬಲವಾದ ನಂಬಿಕೆ ಇದೆ ಎಂದು ತೋರಿಸಿದ್ದು, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ‘ಎವಲೂಷನ್ ಆಫ್ ಎಂಡ್‌ಲೆಸ್ ಸರ್ವೆ ಆಫ್ ಕೆಎಪಿ ಆಫ್ ಸಿಟಿಜನ್’ ಎಂಬ ಶೀರ್ಷಿಕೆಯಡಿ ನಡೆಸಲಾದ ಸಮೀಕ್ಷೆಯಲ್ಲಿ, ಶೇ.83.61%ರಷ್ಟು ಸಾರ್ವಜನಿಕರು ಇವಿಎಂಗಳು ವಿಶ್ವಾಸಾರ್ಹವೆಂದು ನಂಬಿರುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಶೇ.69.39ರಷ್ಟು ಜನರು ಇವಿಎಂಗಳು ನಿಖರ ಫಲಿತಾಂಶಗಳನ್ನು ನೀಡುತ್ತವೆ ಎಂದು ಒಪ್ಪಿಕೊಂಡಿದ್ದು, 14.22% ಮಂದಿ ಇದಕ್ಕೆ ಬಲವಾಗಿ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.
ಈ ಸಮೀಕ್ಷೆಯು ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಆಡಳಿತ ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳ 5,100 ಮತದಾರರ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ಅಂಕಿಅಂಶಗಳ ಪ್ರಕಾರ ಕಲಬುರಗಿಯಲ್ಲಿ ಅತಿ ಹೆಚ್ಚು, ಅಂದರೆ 83.24% ಮಂದಿ ಇವಿಎಂಗಳ ಮೇಲಿ ನಂಬಿಕೆ ವ್ಯಕ್ತಪಡಿಸಿದರೆ, 11.24% ಮಂದಿ ಪರಾದರ್ಶಕತೆಯನ್ನು ಬಲವಾಗಿ ನಂಬಿದ್ದಾರೆ. ಅದೇ ರೀತಿ ಮೈಸೂರು ವಿಭಾಗದಲ್ಲಿ 70.67% ಹಾಗೂ 17.92%, ಬೆಳಗಾವಿಯಲ್ಲಿ 63.90% ಹಾಗೂ 21.43%, ಬೆಂಗಳೂರು ವಿಭಾಗದಲ್ಲಿ 9.28% ಮಂದಿ ನಂಬಿಕೆ ಹಾಗೂ 63.67% ಮಂದಿ ಇವಿಎಂಗಳು ವಿಶ್ವಾಸಾರ್ಹವೆಂದು ಒಪ್ಪಿಕೊಂಡಿದ್ದಾರೆ. ಇದಲ್ಲದೇ ಬೆಂಗಳೂರು ವಿಭಾಗದಲ್ಲೇ ಅತಿ ಹೆಚ್ಚು (15.67%) ಮತದಾರರು ತಟಸ್ಥ ಅಭಿಪ್ರಾಯಗಳನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!