ಉದಯವಾಹಿನಿ, ಗದಗ: ಸರ್ಕಾರ ಆಯುರ್ವೇದ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೆಟಗೇರಿಯಲ್ಲಿ ನಡೆದಿದೆ.
ಆಯುಷ್ ಇಲಾಖೆ ಸಂಬಂಧಿಸಿದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. 35 ವರ್ಷದ ಮೈಲಾರಲಿಂಗೇಶ್ವರ ಆತ್ಮಹತ್ಯೆ ಮಾಡಿಕೊಂಡ ನೌಕರ. ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿಕ್ಕಮುದುರೆ ಗ್ರಾಮ ನಿವಾಸಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿಬ್ಬಂದಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಯಾರ ಜೊತೆಗೆ ಜಗಳ ಮಾಡಿಕೊಂಡಿದ್ದ. ಈ ಬಗ್ಗೆ ಆಯುಷ್ ಇಲಾಖೆ ಹಿರಿಯ ಅಧಿಕಾರಿ ಜಯಪಾಲಸಿಂಗ್ ಸಮೋರಕರ್ ಬಳಿ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆಯುಷ್ ಇಲಾಖೆ ಅಧಿಕಾರಿಗಳು ಹಾಗೂ ಆಸ್ಪತ್ರೆ ವೈದ್ಯಾಧಿಕಾರಿಗಳು, ಬೆಟಗೇರಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಆಸ್ಪತ್ರೆ ವೈದ್ಯಾಧಿಕಾರಿ ರೇಣುಕಾ ತೆರದಾಳ ಹೇಳುವ ಪ್ರಕಾರ, 2019 ರಿಂದ ಹೊರಗುತ್ತಿಗೆ ಡಿ ಗ್ರೂಪ್ ನೌಕರನಾಗಿದ್ದ. ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಾಯಂಕಾಲ 7 ಗಂಟೆವರೆಗೂ ಕೆಲಸ ಮಾಡಿದ್ದಾನೆ. ಅಧಿಕಾರಿಗಳು, ಸಿಬ್ಬಂದಿ ಹೋಗುವ ವರೆಗೂ ಆಸ್ಪತ್ರೆಯಲ್ಲಿದ್ದ. ರೋಗಿಗಳು ಇದ್ದರೆ ರಾತ್ರಿ ಪಾಳಿ ಮಾಡುತ್ತಾರೆ. ಯಾರೂ ಇಲ್ಲದಿದ್ದರೆ 7 ಗಂಟೆಗೆ ಕೆಲಸ ಮುಗಿಯುತ್ತದೆ. ನಿನ್ನೆ ನಮ್ಮ ಜೊತೆಗೆ ಚನ್ನಾಗಿ ಮಾತಮಾಡಿದ್ದಾನೆ. ನಮ್ಮ ಬಳಿ ಏನು ಹೇಳಿಕೊಂಡಿಲ್ಲ. ನಾವು ಯಾವುದೇ ಕೆಲಸದ ಒತ್ತಡ, ಕಿರುಕುಳ ನೀಡಿಲ್ಲ. ನಿನ್ನೆ ಸಾಯಂಕಾಲ ಆಸ್ಪತ್ರೆ ಒಳಗಡೆ ಬಾಗಿಲು ಲಾಕ್ ಮಾಡಿಕೊಂಡಿದ್ದ ಎಂಬ ಮಾಹಿತಿ ಇದೆ ಎಂದಿದ್ದಾರೆ.
