
ಉದಯವಾಹಿನಿ, ಬಲೂಚಿಸ್ತಾನದ ಪ್ರಮುಖ ನಾಯಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಮೀರ್ ಯಾರ್ ಬಲೂಚ್, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಜ.12026ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ರಿಪಬ್ಲಿಕ್ ಆಫ್ ಬಲೂಚಿಸ್ತಾನದ ಪ್ರತಿನಿಧಿ ಮಿರ್ ಯಾರ್ ಬಲೂಚ್ ಬಹಿರಂಗ ಪತ್ರವನ್ನು ಹಂಚಿಕೊಂಡಿದ್ದು, ಬಲೂಚಿಸ್ತಾನದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಗಳು ನಿರ್ಲಕ್ಷಿಸಲ್ಪಟ್ಟರೆ ಚೀನಾ ತನ್ನ ಸೇನೆಯನ್ನು ನಿಯೋಜಿಸಬಹುದು. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಭಾರತ ಮತ್ತು ಬಲೂಚಿಸ್ತಾನದ ಭವಿಷ್ಯಕ್ಕೆ ಊಹಿಸಲಾಗದ ಬೆದರಿಕೆಯನ್ನೊಡ್ಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಲೂಚಿಸ್ತಾನದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸದಿದ್ದರೆ ಮತ್ತು ಅವುಗಳನ್ನು ಎಂದಿನಂತೆ ನಿರ್ಲಕ್ಷಿಸಿದರೆ, ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಸೇನೆಯನ್ನು ಬಲೂಚಿಸ್ತಾನದಲ್ಲಿ ನಿಯೋಜಿಸಬಹುದು. 60 ಮಿಲಿಯನ್ ಬಲೂಚ್ ಜನರ ಇಚ್ಛೆಯಿಲ್ಲದೆ ಚೀನಾದ ಸೈನಿಕರು ಬಲೂಚಿಸ್ತಾನದ ನೆಲದಲ್ಲಿರುವುದು, ಭಾರತ ಮತ್ತು ಬಲೂಚಿಸ್ತಾನದ ಭವಿಷ್ಯಕ್ಕೆ ಊಹಿಸಲಾಗದ ಬೆದರಿಕೆ ಮತ್ತು ಸವಾಲನ್ನು ಒಡ್ಡುತ್ತದೆ ಎಂದು ತಿಳಿಸಿದ್ದಾರೆ.
