ಉದಯವಾಹಿನಿ, ಅಮರಾವತಿ: ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ಒಎನ್‌ಜಿಸಿ ಪೈಪ್‌ಲೈನ್‌ ಸ್ಫೋಟಗೊಂಡು ಭಾರೀ ಪ್ರಮಾಣದ ಅನಿಲ ಸೋರಿಕೆಯಾಗಿದೆ. ಕೊನಸೀಮಾ ಜಿಲ್ಲೆಯ ಮಾಲಿಕಿಪುರಂ ಮಂಡಲದ ಇರುಸುಮಂಡ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮಿದ್ದು ಕೃಷಿ ಭೂಮಿಗಳು ಸುಟ್ಟು ಹೋಗಿವೆ.ಸೋರಿಕೆಯಾಗುತ್ತಿದ್ದಂತೆ ಮೂರು ಗ್ರಾಮಗಳ ಜನರನ್ನು ಹತ್ತಿರ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದ್ದು ವಿದ್ಯುತ್, ಗ್ಯಾಸ್‌ ಸ್ಟೌ ಮತ್ತು ಒಲೆಯನ್ನು ಹೊತ್ತಿಸಬೇಡಿ ಎಂದು ಸೂಚಿಸಲಾಗಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಒಎನ್‌ಜಿಸಿ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಒಎನ್‌ಜಿಸಿ ಬಾವಿಯಲ್ಲಿ ಮರು ಕೊರೆಯುವ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ ಅನಿಲವು ಹೆಚ್ಚಿನ ಒತ್ತಡದಿಂದ ಸ್ಫೋಟಗೊಂಡಿರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!