ಉದಯವಾಹಿನಿ, ಕ್ಯಾರಕಾಸ್: ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ನಡೆಸಿದೆ ಎಂದು ಆರೋಪಿಸಿರುವ “ಅತ್ಯಂತ ಗಂಭೀರ ಮಿಲಿಟರಿ ಆಕ್ರಮಣ’ದ ವಿರುದ್ಧ ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಶನಿವಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಶನಿವಾರ ಮುಂಜಾನೆ ನಗರದಾದ್ಯಂತ ಯುದ್ಧ ವಿಮಾನಗಳ ಭಾರೀ ಶಬ್ದದೊಂದಿಗೆ ಹಲವು ಸ್ಫೋಟಗಳು ಕೇಳಿಬಂದಿವೆ ಎಂದು ಎಎಫ್‌ಪಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಈ ಶಬ್ದಗಳು ಸ್ಥಳೀಯ ಸಮಯ ಬೆಳಿಗ್ಗೆ ಸುಮಾರು 2 ಗಂಟೆ ಸುಮಾರಿಗೆ ಕೇಳಿಬಂದಿದ್ದು, ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.
ಕ್ಯಾರಕಾಸ್‌ನಲ್ಲಿ ಸಂಭವಿಸಿದ ಸ್ಫೋಟಗಳನ್ನು ಅಮೆರಿಕ ನಡೆಸಿದ “ಮಿಲಿಟರಿ ಆಕ್ರಮಣ” ಎಂದು ವೆನೆಝುವೆಲಾ ಸರ್ಕಾರ ಆರೋಪಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಾಜಧಾನಿ ಕ್ಯಾರಕಾಸ್ ಜೊತೆಗೆ ಮಿರಾಂಡಾ, ಅರಾಗುವಾ ಹಾಗೂ ಲಾ ಗೈರಾ ರಾಜ್ಯಗಳಲ್ಲಿಯೂ ದಾಳಿಗಳು ನಡೆದಿವೆ ಎಂದು ‘ದಿ ಗಾರ್ಡಿಯನ್ ವೆನೆಝುವೆಲಾ ಸರ್ಕಾರವನ್ನು ಉಲ್ಲೇಖಿಸಿ ತಿಳಿಸಿದೆ.
