ಉದಯವಾಹಿನಿ, ಬಿಗ್‌ಬಾಸ್ ಸೀಸನ್-12, 100ನೇ ದಿನದತ್ತ ದಾಪುಗಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆ ರಣರಂಗವಾಗ್ತಿದೆ. ಸ್ಪರ್ಧಿಗಳ ಮಧ್ಯೆ ಬಿರುಸಿನ ಸೆಣಸಾಟ ಶುರುವಾಗಿದ್ದು, ಒಬ್ಬರನ್ನ ಕಂಡರೇ ಮತ್ತೊಬ್ಬರು ಉರಿದು ಬೀಳ್ತಿದ್ದಾರೆ.ಕಳೆದ ವಾರ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಗಿಲ್ಲಿ ನಟನ ಮೇಲೆ ಮನೆಮಂದಿ ಸಾಲು ಸಾಲು ಆರೋಪ ಹೊರಿಸಿದ್ದಾರೆ. ಕಿಚ್ಚ ಸುದೀಪ್ ಮುಂದೆ ಬಿಗ್‌ಬಾಸ್ ಸ್ಪರ್ಧಿಗಳು ಗಿಲ್ಲಿ ಕ್ಯಾಪ್ಟನ್ ಆದ ವಾರ ಮನೆ ಹೇಗಿತ್ತು ಎನ್ನುವ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಗ್‌ಬಾಸ್ ಮನೇಲಿ ತಮ್ಮ ಅಸ್ತಿತ್ವಕ್ಕಾಗಿ ಜೋರು ಜಗಳ, ಕದನ, ಕಿತ್ತಾಟ ಸಹಜವಾಗಿಯೇ ತಾರಕಕ್ಕೇರಿವೆ. ಅದ್ರಲ್ಲೂ ಗಿಲ್ಲಿ ಹಾಗೂ ಅಶ್ವಿನಿ ಹಾವು ಮುಂಗುಸಿಯಂತೆ ಕಿತ್ತಾಟಕ್ಕಿಳಿದಿದ್ದಾರೆ. ಹಾಗಾಗಿ ರೋಚಕ ವಾತಾವರಣವೇ ಸೃಷ್ಟಿಯಾಗಿದೆ. ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಹಲಾವರು ವಿಚಾರಗಳು ಚರ್ಚೆಯ ವಿಷಯವಾಗಿವೆ. ಆದ್ರಲ್ಲೂ ಗಿಲ್ಲಿಯ ನಿಭಾಯಿಸಿದ ಕ್ಯಾಪ್ಟನ್ಸಿ ಮೇಲೆ ಎಲ್ಲರೂ ದೂರಿದ್ದಾರೆ.ಬಿಗ್‌ಬಾಸ್ ಮನೆಯ ಎಂಟರ್ಟೈನರ್ ಎನಿಸಿಕೊಂಡಿರುವ ಗಿಲ್ಲಿ ಅಷ್ಟೆ ಬೇಜವಾಬ್ದಾರಿ, ಸೋಮಾರಿಯೂ ಹೌದು. ಕ್ಯಾಪ್ಟನ್ ಜೊತೆಗೆ ಟಾಸ್ಕ್‌ಗಳಲ್ಲಿ ಉಸ್ತುವಾರಿ ಸಹ ವಹಿಸಿದ್ದರು. ಇದೀಗ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ಗೆ ಮರಳಿದ್ದು, ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ಮನೆ ಸದಸ್ಯರ ಅಭಿಪ್ರಾಯ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!