ಉದಯವಾಹಿನಿ, ಬೆಂಗಳೂರು: ನಗರದ ಕೇಂದ್ರ ನಗರಪಾಲಿಕೆಯು ಸೋಮವಾರ (ಜ.5) ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ತಮ್ಮ ಏರಿಯಾ ಸಮಸ್ಯೆಗಳನ್ನು ತಿಳಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಸೋಮವಾರ ಸಂಜೆ 6 ರಿಂದ 7 ಗಂಟೆ ವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದ್ದು, ಗ್ರಾಹಕರು ಸಹಾವಾಣಿ ಸಂ. 080-22975803 ಗೆ ಕರೆ ಮಾಡಿ ನೇರವಾಗಿ ಆಯುಕ್ತರಿಗೆ ಅಹವಾಲು ತಿಳಿಸಬಹುದಾಗಿದೆ.ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ಥಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಕಸ ವಿಲೇವಾರಿ, ಒಣಗಿದ/ಅಪಾಯಕಾರಿ ಮರ/ಕೊಂಬೆಗಳ ಕತ್ತರಿಸುವಿಕೆ, ಉದ್ಯಾನವನಗಳ ನಿರ್ವಹಣೆ, ಇ-ಖಾತಾ ಸಂಬಂಧಿತ ವಿಷಯಗಳು, ಅನಧಿಕೃತ ಬ್ಯಾನರ್/ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗದ ನಿರ್ವಹಣೆ ಮತ್ತು ಒತ್ತುವರಿ ತೆರವು, ಚರಂಡಿ ಶುದ್ಧೀಕರಣ, ನಗರಪಾಲಿಕೆಯಿಂದ ಇನ್ನಿತರೆ ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಅಹವಾಲು ತಿಳಿಸಬಹುದು ರಾಜೇಂದ್ರ ಚೋಳನ್ ಹೇಳಿದ್ದಾರೆ.
