ಉದಯವಾಹಿನಿ, ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣವನ್ನು ಸಿಐಡಿಗೆ ಕೊಡುವ ಯೋಚನೆ ಇದೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತಾಡಿ ಮುಂದಿನ ತೀರ್ಮಾನ ಮಾಡ್ತೀವಿ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಬಳ್ಳಾರಿ ಗಲಾಟೆಯಲ್ಲಿ ಫೈಯರ್ ಆಗಿರೋದು ಖಾಸಗಿ ಗನ್‌ನಿಂದ. ಖಾಸಗಿ ಗನ್ ಮ್ಯಾನ್‌ಗಳ ಗನ್, ರಿವಾಲ್ವಾರ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಯಾವ ಗನ್‌ನಿಂದ ಫೈಯರ್ ಆಗಿದೆ ಎಂದು ಪರಿಶೀಲನೆ ಮಾಡೋಕೆ ಅದನ್ನು ತಜ್ಞರಿಗೆ ಕೊಡಲಾಗಿದೆ. FSLಗೆ ಬುಲೆಟ್ ಎಲ್ಲಾ ಕೊಟ್ಟು ಪರಿಶೀಲನೆ ಮಾಡಿ ರಿಪೋರ್ಟ್ ಕೊಡೋಕೆ ಹೇಳಿದ್ದೇನೆ. ಆ ಪ್ರೊಸೇಸ್ ಮಾಡ್ತಾ ಇದ್ದಾರೆ. ಪೊಲೀಸ್ ಗನ್ ನಿಂದ ಫೈಯರ್ ಆಗಿಲ್ಲ ಅಂತ ಗೊತ್ತಾಗಿದೆ. ಎಡಿಜಿಪಿ ಮಾಹಿತಿ ಕೊಟ್ಟಿದ್ದಾರೆ. ಅದನ್ನ ಈಗ ಪರಿಶೀಲನೆ ಮಾಡಿ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.ಪ್ರಕರಣ CIDಗೆ ಕೊಡೋ ಬಗ್ಗೆ ಯೋಚನೆ ಮಾಡ್ತಾ ಇದ್ದೇವೆ. CIDಗೆ ಕೊಡೋ ಸಾಧ್ಯತೆ ಇದೆ. ಸಿಎಂ ಅವರ ಜೊತೆ ಮಾತಾಡ್ತೀನಿ. ಅದರ ಅಗತ್ಯ ಇದ್ದರೆ ಸಿಐಡಿ ತನಿಖೆಗೆ ಕೊಡ್ತೀವಿ ಅಂತ ತಿಳಿಸಿದರು.
ಆರೋಪಿಗಳನ್ನ ಬಂಧನ ಮಾಡದೇ ಹೋದ್ರೆ ಬೆಂಗಳೂರು ಪಾದಯಾತ್ರೆ ಮಾಡ್ತೀವಿ ಎಂಬ ಶ್ರೀರಾಮುಲು ಹೇಳಿಕೆಗೆ ಬಂಧನ ಮಾಡೋದು ದೊಡ್ಡ ಕೆಲಸ ಅಲ್ಲ. ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅಂತ ಪೊಲೀಸರು ನೋಡಿ ಕ್ರಮ ತೆಗೆದುಕೊಳ್ತಾರೆ. ಖಾಸಗಿ ಗನ್‌ನಿಂದ ಫೈಯರ್ ಆಗಿದೆ. ಅ ತನಿಖೆ ಆದ ಮೇಲೆ ಯಾರ ಗನ್ ನಿಂದ ಫೈಯರ್ ಆಗಿದೆ ಅವರ ಬಂಧನ ಮಾಡ್ತಾರೆ. ಬಂಧನ ಮಾಡೋಕೆ ಪ್ರೊಸೀಜರ್ ಇವೆ. ಅದನ್ನ ಪೊಲೀಸರು ಮಾಡ್ತಾರೆ ಅಂತ ಸ್ಪಷ್ಟಪಡಿಸಿದರು.
