ಉದಯವಾಹಿನಿ, ಹೋಳಿ ಹಬ್ಬವನ್ನು ರಾಜ್ಯದ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಲು ಬಹುತೇಕರ ಮನೆಯಲ್ಲಿ ಹೋಳಿಗೆ ಅಥವಾ ಒಬ್ಬಟ್ಟು, ಬರ್ಫಿ, ಲಡ್ಡು ಸೇರಿದಂತೆ ವಿವಿಧ ಪ್ರಕಾರದ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇದೀಗ ನೂತನ ಶೈಲಿಯ ಪಾಯಸ ಸಿದ್ಧಪಡಿಸಬಹುದು. ಪಾಯಸದ ವಿಷಯಕ್ಕೆ ಬಂದಾಗ ಹೆಚ್ಚಿನ ಜನರು ಇದನ್ನು ಶ್ಯಾವಿಗೆ ಮತ್ತು ಸ್ಟಫ್ಡ್ ರೈಸ್​ನಿಂದ ತಯಾರಿಸಲಾಗುತ್ತದೆ ಅಂದುಕೊಳ್ಳುತ್ತಾರೆ.

ಈ ಪಾಯಸವನ್ನು ಪನೀರ್​ನಿಂದ ಕೂಡ ಮಾಡಬಹುದು. ಈ ರೀತಿ ತಯಾರಿಸಿದರೆ ತುಂಬಾ ರುಚಿಕರವಾಗಿರುತ್ತದೆ. ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಈ ಪಾಯಸ ಒಮ್ಮೆ ಮಾಡಿದರೆ, ಎರಡು ದಿನಗಳವರೆಗೆ ಸಂತೋಷದಿಂದ ಸೇವಿಸಬಹುದು. ಹೊಸ ಶೈಲಿಯ ಸಿಹಿ ತಿನ್ನಲು ಬಯಸಿದಾಗ ರೆಸಿಪಿಯನ್ನು ಪ್ರಯತ್ನಿಸಬಹುದು. ಸಂಬಂಧಿಕರು ಇಲ್ಲವೇ ಸ್ನೇಹಿತರು ಮನೆಗೆ ಬಂದಾಗ ಈ ಸ್ವೀಟ್​ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಅವರು ಕೂಡ ಇದ ರುಚಿಗೆ ಫಿದಾ ಆಗುತ್ತಾರೆ. ಈ ಪಾಯಸವನ್ನು ನೀವು ತಣ್ಣಗೆ ಹಾಗೂ ಬಿಸಿಯಾಗಿದ್ದಾಗ ಸೇವಿಸಿದರೂ ಟೇಸ್ಟ್​ ಅದ್ಭುತವಾಗಿರುತ್ತದೆ. ಈಗ ರುಚಿ ರುಚಿಯಾದ ಪನೀರ್ ಪಾಯಸ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಪನೀರ್ – 400 ಗ್ರಾಂ
ಹಾಲು – 2 ಲೀಟರ್
ಕೇಸರಿ – 2 ಚಿಟಿಕೆ
ಏಲಕ್ಕಿ ಪುಡಿ – 1 ಟೀಸ್ಪೂನ್
ಡ್ರೈ ಫ್ರೂಟ್ಸ್ – ಸ್ವಲ್ಪ
ಸಕ್ಕರೆ – ಒಂದು ಕಪ್
ಪನೀರ್ ಪಾಯಸ ಸಿದ್ಧಪಡಿಸುವ ವಿಧಾನ:

ಹೋಳಿ ಹಬ್ಬಕ್ಕೆ ಹೇಳಿ ಮಾಡಿಸಿದ ಪನೀರ್ ಪಾಯಸ ತಯಾರಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಎರಡು ಕಪ್ ನೀರು ಸುರಿಯಿರಿ, ಕುದಿಸಿ ಮತ್ತು ಒಲೆ ಆಫ್ ಮಾಡಿ. ಬಿಸಿ ನೀರಿಗೆ 400 ಗ್ರಾಂ ಪನೀರ್ ಅನ್ನು ಸೇರಿಸಿ ಹಾಗೂ 15 ನಿಮಿಷಗಳ ಕಾಲ ನೆನೆಸಿ.
ಹದಿನೈದು ನಿಮಿಷಗಳ ಬಳಿಕ, ಪನೀರ್ ಅನ್ನು ತೆಗೆದು ತುರಿಯುವ ಮಣೆಯೊಂದಿಗೆ ನುಣ್ಣಗೆ ತುರಿದುಕೊಳ್ಳಬೇಕಾಗುತ್ತದೆ.
ಮತ್ತೊಂದೆಡೆ, ಒಲೆ ಆನ್ ಮಾಡಿ ಹಾಗೂ ಪ್ಯಾನ್‌ನಲ್ಲಿ ಎರಡು ಲೀಟರ್ ಹಾಲನ್ನು ಸುರಿಯಿರಿ. ಹಾಲು ಕುದಿಯುತ್ತಿರುವಾಗ, ಒಂದು ಕಪ್ ಸಕ್ಕರೆ ಸೇರಿಸಿ ಹಾಗೂ ಕುದಿಸಿ.

Leave a Reply

Your email address will not be published. Required fields are marked *

error: Content is protected !!