ಉದಯವಾಹಿನಿ , ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋನಿಯಾ ಅವರಿಗೆ ದೀರ್ಘಕಾಲದ ಕೆಮ್ಮಿನ ಸಮಸ್ಯೆ ಇದ್ದು ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಚಳಿಗಾಲದಿಂದ ಇದು ತೀವ್ರಗೊಂಡಿದೆ. ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಸೋನಿಯಾ ಗಾಂಧಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಈ ದಾಖಲಾತಿ ಸಾಮಾನ್ಯ ತಪಾಸಣೆಗೆ ಸಂಬಂಧಿಸಿದೆ ಎಂಧು ತಿಳಿಸಿದ್ದಾರೆ.ಡಿಸೆಂಬರ್ 2025ರಲ್ಲಿ 79 ವರ್ಷ ತುಂಬಿದ ಸೋನಿಯಾ ಗಾಂಧಿ ಅವರು ಹಿಂದೆಯೂ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2025ರ ಜೂನ್‌ನಲ್ಲಿ ಹೊಟ್ಟೆ ಸಂಬಂಧಿತ ಸೋಂಕಿನಿಂದ ಚಿಕಿತ್ಸೆ ಪಡೆದಿದ್ದರು.
