ಉದಯವಾಹಿನಿ , ಗಾಂಧಿನಗರ/ಇಂದೋರ್‌/ಭುವನೇಶ್ವರ: ಗುಜರಾತ್‌, ಒಡಿಶಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಜನರನ್ನ ಕಾಡತೊಡಗಿವೆ. ಗುಜರಾತ್‌ನಲ್ಲಿ ಟೈಫಾಯ್ಡ್‌, ಒಡಿಶಾದಲ್ಲಿ ಜಾಂಡೀಸ್‌ ಹಾಗೂ ಮಧ್ಯಪ್ರದೇಶದಲ್ಲಿ ಅತಿಸಾರ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳನ್ನ ಬಾಧಿಸುತ್ತಿವೆ.

ಗುಜರಾತ್‌ನಲ್ಲಿ 119 ಮಂದಿ ಟೈಫಾಯ್ಡ್‌ಗೆ ತುತ್ತಾಗಿದ್ದು, ಈ ಪೈಕಿ 104 ಜನ ಮಕ್ಕಳೇ ಇದ್ದಾರೆ. ಮಧ್ಯಪ್ರದೇಶದಲ್ಲಿ 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 20 ಮಂದಿಗೆ ಅತಿಸಾರ ಸಮಸ್ಯೆ ಕಾಣಿಸಿಕೊಂಡಿದೆ. ಇನ್ನೂ ಒಡಿಶಾದಲ್ಲಿ ಜಾಂಡೀಸ್‌ ಸಮಸ್ಯೆಗೆ ತುತ್ತಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗುಜರಾತ್‌ನಲ್ಲಿ ಟೈಫಾಯ್ಡ್‌
ಗುಜರಾತ್‌ನ ಗಾಂಧಿನಗರದ ಸೆಕ್ಟರ್‌ 24 ಮತ್ತು 28 ಹಾಗೂ ಅಡಿವಾಡ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಸುಮಾರು 119 ಮಂದಿ ಶಂಕಿತ ಟೈಫಾಯ್ಡ್‌ಗೆ ತುತ್ತಾಗಿದ್ದಾರೆ. ಈ ಪೈಕಿ 104 ಜನ ಮಕ್ಕಳಿದ್ದಾರೆ. ಕನಿಷ್ಠ 7 ಸ್ಥಳಗಳಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!