ಉದಯವಾಹಿನಿ , ಚೆನ್ನೈ: ಮೂಢನಂಬಿಕೆ ಅಥವಾ ಅವೈಜ್ಞಾನಿಕ ಸಾರ್ವಜನಿಕರ ಭೀತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಮೂರ್ತಿಗಳನ್ನು ಖಾಸಗಿಯಾಗಿ ಪೂಜಿಸುತ್ತಿದ್ದರೆ ಅದಕ್ಕೆ ಇತರರು ಅಡ್ಡಿಪಡಿಸಲು ಸಾಧ್ಯವಿಲ್ಲ. ಅಂತೆಯೇ ಇಂತಹ ಕೃತ್ಯಗಳ ವಿರುದ್ಧ ಇರುವ ಸಾರ್ವಜನಿಕರ ಮೌಢ್ಯಕ್ಕೆ ಸರ್ಕಾರ ತಲೆಬಾಗುವಂತಿಲ್ಲ ಎಂದು ನ್ಯಾ.ಡಿ ಭರತ ಚಕ್ರವರ್ತಿ ಆದೇಶಿಸಿದರು.

ಚೆನ್ನೈನ ಮನೆಯೊಂದರಲ್ಲಿ ಪೂಜಿಸಲಾಗುತ್ತಿದ್ದ ಹಿಂದೂ ದೇವರ ಮೂರ್ತಿಗೂ ಆ ಪ್ರದೇಶದಲ್ಲಿ ಉಂಟಾದ ಅಸ್ವಾಭಾವಿಕ ಸಾವಿಗೂ ನಂಟು ಇದೆ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮೂರ್ತಿ ತೆರವುಗೊಳಿಸಿದ್ದ ಪ್ರಕರಣ ವಿಚಾರದಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ.
ಒಬ್ಬ ವ್ಯಕ್ತಿ ತನ್ನ ಸ್ವಂತ ಆವರಣದಲ್ಲಿ ಯಾವುದೇ ಮೂರ್ತಿಯನ್ನು ಇಟ್ಟುಕೊಂಡು ಸ್ವತಃ ಶಾಂತವಾಗಿ ಪೂಜೆ ಮಾಡಲು ಅಥವಾ ಇಚ್ಛೆಯಿರುವ ಸ್ನೇಹಿತರು ಅಥವಾ ನೆರೆಹೊರೆಯವರನ್ನು ಆಹ್ವಾನಿಸಿ ಪೂಜೆ ಮಾಡಲು ಬಯಸಿದರೆ, ಬಹುಸಂಖ್ಯಾತರ ಬಲದ ಆಧಾರದಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಇಂತಹ ಮೂಢನಂಬಿಕೆಗಳು ಮತ್ತು ಅಂಧಶ್ರದ್ಧೆಗಳಿಗೆ ಸರ್ಕಾರಿ ಅಧಿಕಾರಿಗಳು ಶರಣಾಗಬಾರದು. ದೇವರು ಅಥವಾ ಮೂರ್ತಿ ಯಾವುದೇ ಮಾನವನಿಗೆ ಹಾನಿ ಮಾಡುವುದಿಲ್ಲ. ಇದು ಕೇವಲ ಮೂಢನಂಬಿಕೆಯಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

error: Content is protected !!