ಉದಯವಾಹಿನಿ, ಚಿಕ್ಕಮಗಳೂರು: ತಾಯಿ ಜೊತೆ ಸೇರಿ ಹಣಕ್ಕಾಗಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿ ತಂದೆಯೇ ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ ಹೃದಯಾವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
16 ವರ್ಷದ ಅಪ್ರಾಪ್ತ ಮಗಳನ್ನ ತಂದೆಯೇ ಮಾರಾಟ ಮಾಡಿ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ನಾಗವಂಗಲ ಗ್ರಾಮದ ಗಿರೀಶ್ ಈ ಕೆಲಸ ಮಾಡಿದ ಪಾಪಿ ತಂದೆ.
6 ವರ್ಷಗಳ ಹಿಂದೆ ಅನಾರೋಗ್ಯದಿಂದ ತಾಯಿ ಸಾವನ್ನಪ್ಪಿದ ಬಳಿಕ ನೊಂದ ಬಾಲಕಿ ಅಜ್ಜಿ-ಅಪ್ಪನ ಜೊತೆ ವಾಸವಿದ್ದಳು. ಹಣಕ್ಕಾಗಿ ಅಪ್ಪ-ಅಜ್ಜಿ ಇಬ್ಬರು ಸೇರಿ ಬ್ರೋಕರ್ ನಾರಾಯಣಸ್ವಾಮಿ ಮೂಲಕ ಮಂಗಳೂರಿನ ಭರತ್ ಶೆಟ್ಟಿ ಮನೆಗೆ ಹೋಗೋಣ ಎಂದು ಕರೆದೊಯ್ದು ಅಲ್ಲೇ ಆಕೆ ಮೇಲೆ ಅಪ್ಪನ ಸಹಕಾರದಿಂದಲೇ ಅತ್ಯಾಚಾರವೆಸಗಿದ್ದಾರೆ. 6 ದಿನಗಳ ಅಂತರದಲ್ಲಿ ಬಾಲಕಿ ಋತುಸ್ರಾವ ಆಗಿದ್ದರೂ ಕೂಡ 8 ರಿಂದ 10 ಜನ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
