
ಉದಯವಾಹಿನಿ ಕೊಲ್ಹಾರ: ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುವ ಮೂಲಕ ರಾಜ್ಯದ ಜನತೆಯ ಹಿತವನ್ನು ಕಾಪಾಡುವಲ್ಲಿ ಶ್ರಮಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಚುನಾವಣೆಯ ಮುಂಚೆ ನೀಡಿದ ಐದು ಭರವಸೆಗಳನ್ನು ಇಡೇರಿಸುವಲ್ಲಿ ಹೆಜ್ಜೆ ಇಟ್ಟಿದೆ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಬಿಜೆಪಿ ಪಕ್ಷ ಚುನಾವಣೆಯ ಸೋಲಿನಿಂದ ಹತಾಶಗೊಂಡಿದೆ ಬಿಜೆಪಿ ಶಾಸಕರು ಉಪಸಭಾಪತಿಗಳ ಮೇಲೆ ಕಾಗದ ಎಸೆದು ಉದ್ಧಟತನ ತೋರುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಜವಾಬ್ದಾರಿಯುತ ಶಾಸಕರಾದವರಿಗೆ ಇದು ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.
ಕೇಂದ್ರದ ಬಿಜೆಪಿ ಆಡಳಿತದಿಂದ ಜನರು ಹತಾಶಗೊಂಡಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿಹೆಚ್ಚು ಲೋಕಸಭಾ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಜನರ ನಿರೀಕ್ಷೆಯಂತೆ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಮುಖಂಡ ದಸ್ತಗೀರ ಕಾಖಂಡಕಿ ಹಾಗೂ ಕಾರ್ಯಕರ್ತರು ಇದ್ದರು
