ಉದಯವಾಹಿನಿ, ಏಲಕ್ಕಿ ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಕಂಡುಬರುವ ಮಸಾಲೆ. ಏಲಕ್ಕಿ ಆಹಾರ ಹಾಗೂ ಟೀ ರುಚಿ ಹೆಚ್ಚಿಸುವುದಲ್ಲದೆ ಹಲವು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ. ಏಲಕ್ಕಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಂ, ಮ್ಯಾಂಗನೀಸ್ ಹಾಗೂ ತಾಮ್ರದಂತಹ ಹಲವು ಅಗತ್ಯ ಪೋಷಕಾಂಶಗಳಿವೆ. ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲೂ ಇದು ತುಂಬಾ ಸಹಾಯಕ.

ಪುರುಷರು ಪ್ರತಿದಿನ ಒಂದು ಏಲಕ್ಕಿಯನ್ನು ನೀರಿನೊಂದಿಗೆ ಸೇವಿಸಿದರೆ ಅದ್ಭುತ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಪೌಷ್ಟಿಕ ತಜ್ಞೆ ರಾಜಮಣಿ ಪಟೇಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಪುರುಷರು ಏಲಕ್ಕಿ ಸೇವಿಸುವುದರಿಂದ ಲಭಿಸುವ ಪ್ರಯೋಜನಗಳನ್ನು ವಿವರಿಸಿದ್ದಾರೆ. ಟೆಸ್ಟೋಸ್ಟೆರಾನ್ ಮಟ್ಟ ವೃದ್ಧಿ: ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹದಲ್ಲಿನ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒತ್ತಡ ಕಡಿಮೆಯಾದರೆ ಹಾರ್ಮೋನುಗಳ ಸಮತೋಲನ ಸಾಧ್ಯವಾಗುತ್ತದೆ. ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ನೈಸರ್ಗಿಕವಾಗಿ ಸಮತೋಲನಗೊಳಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ದೈಹಿಕ ಶಕ್ತಿ ವರ್ಧನೆ: ಏಲಕ್ಕಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ತುಂಬಾ ಸಹಾಯ ಮಾಡುತ್ತದೆ. ರಕ್ತದ ಹರಿವು ಸರಿಯಾಗಿದ್ದಾಗ ಆಮ್ಲಜನಕ ಹಾಗೂ ಪೋಷಕಾಂಶಗಳು ಎಲ್ಲ ಅಂಗಗಳನ್ನು ಸುಲಭವಾಗಿ ತಲುಪುತ್ತವೆ. ಏಲಕ್ಕಿಯು ಶಕ್ತಿಯ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ವ್ಯಾಯಾಮದ ಸಮಯದಲ್ಲಿ ದೇಹಿಕ ಶಕ್ತಿಯನ್ನು ಸುಧಾರಿಸುತ್ತದೆ. ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ಆಯಾಸ ಕಡಿಮೆಯಾಗುತ್ತದೆ ಹಾಗೂ ದಿನವಿಡೀ ದೇಹವು ಸಕ್ರಿಯವಾಗಿರುತ್ತದೆ.

ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ: ಹೊರಗಿನ ಆಹಾರ ಹೆಚ್ಚು ತಿನ್ನುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವುದು ಹಾಗೂ ಆಮ್ಲೀಯತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಂದರ್ಭಗಳಲ್ಲಿ ಏಲಕ್ಕಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಏಲಕ್ಕಿ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಗ್ಯಾಸ್ಟ್ರಿಕ್ ಅನ್ನು ನಿವಾರಿಸುತ್ತದೆ. ಏಲಕ್ಕಿ ಸೇವನೆ ಮಾಡುವುದರಿಂದ ಆಮ್ಲೀಯತೆ ಹಾಗೂ ಉಬ್ಬುವಿಕೆ ಕಡಿಮೆ ಮಾಡುತ್ತದೆ ಹಾಗೂ ಹೊಟ್ಟೆಯನ್ನು ಹಗುರವಾಗಿರುತ್ತದೆ. ಒತ್ತಡ ತಗ್ಗಿಸುತ್ತದೆ: ಏಲಕ್ಕಿಯ ನೈಸರ್ಗಿಕ ಸುವಾಸನೆಯು ಮನಸ್ಸನ್ನು ಸಂತೋಷಗೊಳಿಸುತ್ತದೆ. ಮನಸ್ಸಿನಲ್ಲಿ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತದೆ. ನರಮಂಡಲವು ಶಾಂತವಾಗಿರಿಸುವ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ದೇಹದಲ್ಲಿ ಆಗುವಂತಹ ಒತ್ತಡ ತಗ್ಗಿಸಲು ತುಂಬಾ ಸಹಾಯ ಮಾಡುತ್ತದೆ.

ಹೃದಯ ಆರೋಗ್ಯಕ್ಕೆ ಅತ್ಯುತ್ತಮ: ಏಲಕ್ಕಿಯನ್ನು ನೈಸರ್ಗಿಕವಾಗಿ ರಕ್ತದೊತ್ತಡ ನಿಯಂತ್ರಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಹೃದಯದ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ, ಆರೋಗ್ಯಕರ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.

 

Leave a Reply

Your email address will not be published. Required fields are marked *

error: Content is protected !!