ಉದಯವಾಹಿನಿ, ದೇಶದ ಯಾವುದೇ ಸಂತೋಷದ ಕ್ಷಣಗಳಲ್ಲಿ ಸಿಹಿತಿಂಡಿಗಳಿಲ್ಲದೇ ಆಚರಣೆ ಮಾಡುವುದಿಲ್ಲ. ಹಬ್ಬವಾಗಲಿ, ಮದುವೆಯಾಗಲಿ ಅಥವಾ ಯಾವುದೇ ಸಂತೋಷದ ಕ್ಷಣಗಳಲ್ಲಿ ಸಿಹಿತಿಂಡಿಗಳನ್ನು ಹಂಚುವುದು ಹಾಗೂ ಸೇವಿಸುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ, ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದೇ ಸಿಹಿ ಸೇವನೆ ಮಾಡಿದರೆ, ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಜೊತೆಗೆ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಸಿಹಿತಿಂಡಿಗಳನ್ನು ಅನಿಯಂತ್ರಿತವಾಗಿ ಸೇವಿಸುವುದರಿಂದ ಮಧುಮೇಹ, ಫ್ಯಾಟಿ ಲಿವರ್, ಅಧಿಕ ಕೊಲೆಸ್ಟ್ರಾಲ್, ಪಿಸಿಒಡಿ ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವು ಹೆಚ್ಚಿಸುತ್ತದೆ. ಇದರರ್ಥ ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದಲ್ಲ. ಬದಲಿಗೆ ನಾವು ಅವುಗಳನ್ನು ಬುದ್ಧಿವಂತಿಕೆಯಿಂದ ಸೇವಿಸಬೇಕಾಗುತ್ತದೆ. ಸಿಹಿ ತಿನಿಸುಗಳನ್ನು ತಿನ್ನುವಾಗ ನಾವು ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ನಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ತಡೆಯಲು ಸಾಧ್ಯವಾಗುತ್ತದೆ. ನಾವು ಜೀವನದ ಸಿಹಿ ಕ್ಷಣಗಳನ್ನು ಆನಂದಿಸಬಹುದು. ಸರಿಯಾದ ಸಮತೋಲನ ಹಾಗೂ ಸರಿಯಾದ ಆಯ್ಕೆ ಮಾತ್ರ ರೋಗಗಳ ಬಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ಈ ಪ್ರಮುಖ ವಿಷಯದ ಕುರಿತು ಆರೋಗ್ಯ ತಜ್ಞೆ ಡಾ.ಶಾಲಿನಿ ಸಿಂಗ್ ಸೋಲಂಕಿ ಅವರು, ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ಕೆಲವು ಮಹತ್ವದ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಹಣ್ಣುಗಳ ಜೊತೆಗೆ ಈ ಡ್ರೈ ಫ್ರೂಟ್ಸ್ ಸೇರಿಸಿ: ಜನರು ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ (ಫ್ರಕ್ಟೋಸ್) ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಎಂದಿಗೂ ಹಣ್ಣನ್ನು ಮಾತ್ರ ತಿನ್ನಬಾರದು. ಈ ಹಣ್ಣುಗಳ ಜೊತೆಗೆ ಗೋಡಂಬಿ, ಬಾದಾಮಿ ಅಥವಾ ವಾಲ್ನಟ್​​ಗಳಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಸೇರಿಸಿ ಸೇವಿಸಬೇಕು. ಈ ರೀತಿಯ ಸಂಯೋಜನೆ ಸಕ್ಕರೆಯನ್ನು ಹೀರಿಕೊಳ್ಳುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಜೊತೆಗೆ ದೇಹಕ್ಕೆ ಸ್ಥಿರವಾದ ಶಕ್ತಿ ನೀಡುತ್ತದೆ.
ಡಾರ್ಕ್ ಚಾಕೊಲೇಟ್ ಅತ್ಯುತ್ತಮ: ಯಾವುದೇ ಆಚರಣೆಯ ಸಮಯದಲ್ಲಿ ಸಕ್ಕರೆ ಸಹಿತ ಹಾಲನ್ನು ನೀಡಲಾಗುತ್ತದೆ. ಈ ಹಾಲಿನಲ್ಲಿ ಡಾರ್ಕ್ ಚಾಕೊಲೇಟ್ ಸೇರಿಸಬಹುದು. ಡಾರ್ಕ್ ಚಾಕೊಲೇಟ್ ಹೃದಯಕ್ಕೆ ಒಳ್ಳೆಯದಾಗಿದೆ. ಇದರಿಂದ ದೇಹಕ್ಕೆ ಉತ್ಕರ್ಷಣ ನಿರೋಧಕಗಳು ಅಗತ್ಯ ಪ್ರಮಾಣದಲ್ಲಿ ಲಭಿಸಲು ಸಾಧ್ಯವಾಗುತ್ತದೆ. ಊಟದ ನಂತರ ನೀವು ಒಂದು ಅಥವಾ ಎರಡು ತುಂಡು ಡಾರ್ಕ್ ಚಾಕೊಲೇಟ್ ಸೇವಿಸಬಹುದು. ನಿಮ್ಮ ಸಿಹಿ ಹಂಬಲವನ್ನು ಪೂರೈಸುತ್ತದೆ, ದೇಹಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!