ಉದಯವಾಹಿನಿ ,ಟೆಹರಾನ್‌: ಇಸ್ರೇಲ್‌ನ ಮೊಸಾದ್‌ಗಾಗಿ ಗೂಢಚಾರ ನಡೆಸಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಗೆ ಇರಾನ್ ಶಿರಚ್ಛೇದ ಮಾಡಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
ಅಲಿ ಅರ್ಡೆಸ್ತಾನಿ ಶಿರಚ್ಛೇದಕ್ಕೆ ಒಳಗಾದ ವ್ಯಕ್ತಿ. ಆತ ದೇಶದ ಸೂಕ್ಷ್ಮ ಮಾಹಿತಿಯನ್ನು ಮೊಸಾದ್ ಅಧಿಕಾರಿಗಳಿಗೆ ರವಾನಿಸಿದ್ದಾನೆ ಎಂದು ವರದಿ ತಿಳಿಸಿದೆ.
ಬೇಹುಗಾರಿಕೆ ಆರೋಪವನ್ನು ಅಲಿ ಒಪ್ಪಿಕೊಂಡಿದ್ದು, ಆತನಿಗೆ ಕ್ರಿಸ್ಟೋಕರೆನ್ಸಿಗಳ ರೂಪದಲ್ಲಿ ಒಂದು ಮಿಲಿಯನ್ ಡಾಲರ್ ಬಹುಮಾನ ಮತ್ತು ಬ್ರಿಟಿಷ್ ವೀಸಾ ಸಿಗುವ ನಿರೀಕ್ಷೆಯಿತ್ತು ಎಂದು ವರದಿ ಹೇಳಿದೆ. ಜೂನ್‌ನಲ್ಲಿ ದೇಶದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ನಂತರ ಬೇಹುಗಾರಿಕೆ ನಡೆಸಿದ್ದಕ್ಕಾಗಿ 12 ಜನರನ್ನು ಇರಾನ್ ಗಲ್ಲಿಗೇರಿಸಿದೆ. ಇಸ್ರೇಲ್ ದಾಳಿಯಿಂದಾಗಿ ಇರಾನ್‌ ನ ಹಿರಿಯ ಮಿಲಿಟರಿ ಕಮಾಂಡರ್‌ಗಳು ಮತ್ತು ಪರಮಾಣು ವಿಜ್ಞಾನಿಗಳು ಸೇರಿದಂತೆ 1,100 ಜನರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!