ಉದಯವಾಹಿನಿ, ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 100 ರಿಂದ 125 ದಿನಕ್ಕೆ ಕೂಲಿ ದಿನ ಹೆಚ್ಚಳ ಮಾಡಿದ್ದಾರೆ. ಇದರಿಂದ ಕೂಲಿಕಾರರಿಗೆ ಅನುಕೂಲ ಆಗಲಿದೆ. ಈ ಯೋಜನೆಯಲ್ಲಿ ಪ್ರತಿ ಮನೆಯಲ್ಲಿ ಕೆಲಸ ಇರುವವರು, ಇಲ್ಲದವರ ಪಟ್ಟಿ ಮಾಡುವುದು, ಅಭಿವೃದ್ಧಿ ಯೋಜನೆ ರೂಪಿಸುವುದು, ಅನುಷ್ಠಾನಗೊಳಿಸುವುದು, ಕಾರ್ಮಿಕರಿಗೆ ಕೂಲಿ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗಳಿಗೆ ಇದೆ. ಆದರೆ ಕಾಂಗ್ರೆಸ್ ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ವಿರೋಧ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಜಿ ರಾಮ್ ಜಿ ಯೋಜನೆಯಲ್ಲಿ ಮ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ ಅಂತ ಹೇಳುತ್ತಾರೆ. ವಿಬಿ ಜಿ ರಾಮ್ ಜಿ ವಿಧೆಯಕದ ಕ್ಲಾಸ್ 16 ರಲ್ಲಿ ಗ್ರಾಮ ಪಂಚಾಯತಿಗೆ ಎಲ್ಲಾ ಮನೆಯಲ್ಲಿ ಕೆಲಸ ಇದೆಯಾ ಇಲ್ವಾ ಅಂತ ನೋಡುವ ಹಕ್ಕಿದೆ. ಗ್ರಾಮದ ಅಭಿವೃದ್ದಿ ಯೋಜನೆ ರೂಪಿಸುವ ಹಕ್ಕು, ಯೋಜನೆ ಅನುಷ್ಠಾನ ಮಾಡುವ ಅಧಿಕಾರ, ಎಲ್ಲಾ ದಾಖಲೆ ಮಾಡುವ ಅಧಿಕಾರ, ಕೂಲಿ ಕೊಡುವ ಅಧಿಕಾರ ಅವರಿಗೆ ಇದೆ. ಯಾಕೆ ಕಾಂಗ್ರೆಸ್ ನವರು ವಿರೋಧ ಮಾಡುತ್ತಿದ್ದಾರೆ ಎಂದರು.
ವಿಕಸಿತ ಭಾರತ ಎಂದರೆ ಗ್ರಾಮ ರಾಜ್ಯ ರಾಮರಾಜ್ಯ ಆಗಲಿ ಅಂತ ಯೋಜನೆ ಮಾಡಿದ್ದಾರೆ. ಈ ಯೋಜನೆಯಲ್ಲಿ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ಕರ್ನಾಟಕದಲ್ಲಿ ಸುಮಾರು 30 ಸಾವಿರ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ನಮ್ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹ್ವಾನ್ ಅವರು, ಇವತ್ತಿನ ಅಗತ್ಯಕ್ಕೆ ತಕ್ಕಂತೆ ಯೋಜನೆ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಧಾರ ಸೀಡಿಂಗ್, ಡಿಜಿಟಲೈಜೇಷನ್ ಮಾಡಿದ್ದಾರೆ.
