ಉದಯವಾಹಿನಿ, ಕೋಲ್ಕತ್ತಾ: ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ವೇಳೆ ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿಗೆ ನುಗ್ಗಿ ಫೈಲ್‌ ತಂದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ 2 ಎಫ್‌ಐಆರ್‌ಗಳು ದಾಖಲಾಗಿದೆ.
ಕಳ್ಳತನ ಮತ್ತು ಕ್ರಿಮಿನಲ್ ಅತಿಕ್ರಮಣ ಆರೋಪದ ಮೇಲೆ ಒಂದು, ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸಿ ದುರ್ವರ್ತನೆ ತೋರಿದ ಆರೋಪದ ಮೇಲೆ ಮತ್ತೊಂದು ಪ್ರಕರಣವನ್ನ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಇಡಿ ದಾಳಿ – I-PAC ಕಚೇರಿಗೆ ನುಗ್ಗಿ ಫೈಲ್‌ ಹೊತ್ತೊಯ್ದ ದೀದಿ
ಜಾರಿ ನಿರ್ದೇಶನಾಲಯವು ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (I-PAC) ಕಚೇರಿ ಮತ್ತು ಅದರ ಹಿರಿಯ ಅಧಿಕಾರಿ ಪ್ರತೀಕ್‌ ಜೈನ್‌ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ (ED Raid) ನಡೆಸಿತ್ತು. ನಗರದಾದ್ಯಂತ ಕನಿಷ್ಠ 5 ಸ್ಥಳಗಳಲ್ಲಿ ಇಡಿ ತಂಡ ದಾಳಿ ನಡೆಸಿತ್ತು. ವಿಷಯ ತಿಳಿಯುತ್ತಿದ್ದಂತೆ ಐ-ಪಿಎಸಿ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ, ಪ್ರಮುಖ ಮಾಹಿತಿಯುಳ್ಳ ಫೈಲ್‌ವೊಂದನ್ನ ತೆಗೆದುಕೊಂಡು ಹೋಗಿದ್ದರು.

Leave a Reply

Your email address will not be published. Required fields are marked *

error: Content is protected !!